ಭಾರತ ಪುರುಷರ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಇದರೊಂದಿಗೆ ಭಾರತ 9ನೇ ಬಾರಿಗೆ ಸ್ಯಾಫ್ ಚಾಂಪಿಯನ್ಶಿಪ್ ಗೆದ್ದುಕೊಂಡಿದೆ.
ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ತಂಡ ಕುವೈತ್ ವಿರುದ್ಧ ರೋಚಕ ಪೆನಾಲ್ಟಿ ಶೂಟೌಟ್ನಲ್ಲಿ 5-4 ಗೋಲುಗಳಿಂದ ಗೆದ್ದುಕೊಂಡಿತು.
ಪೆನಾಲ್ಟಿ ಮೊರೆ ಹೋದಾಗ ನಾಯಕ ಸುನಿಲ್ ಚೆಟ್ರಿ ಗೊಲು ಹೊಡೆದರು. ಕುವೈತ್ ಪರ ಮೊಹ್ಮದ್ ದಾಹಾಮ್ ವಿಫಲರಾದರು. ನಂತರ ಭಾರತ ಪರ ಜಿನ್ಗಾನ್ ಗೋಲು ಹೊಡೆದು 2-0 ಮುನ್ನಡೆ ನೀಡಿದರು. ಕುವೈತ್ ಪರ ಅಹ್ಮದ್ ಅಲ್ ಧೇರಿ ಗೋಲು ಹೊಡೆದರು. ಭಾರತ ಪರ ಉದಾಂತಾ ಸಿಂಗ್ ಗೋಲು ಹೊಡೆಯದಿದ್ದು ತಂಡಕ್ಕೆ ಹಿನ್ನಡೆಯಾಯಿತು. ಕುವೈತ್ ಪರ ಅಬ್ದುಲ್ ಅಜಿಜ್ ಗೋಲು ಹೊಡೆದು 3-3 ಸಮಗೊಳಿಸಿದರು. ಸುಶಿಶ್ ಮತ್ತು ಕೊನೆಯಲ್ಲಿ ನಾರೆಮ್ ಮಹೇಶ್ ಸಿಂಗ್ ಗೊಲು ಹೊಡೆದು ರೋಚಕ ಗೆಲುವು ತಂದುಕೊಟ್ಟರು.
ಸಮಬಲ ಸಾಧಿಸಿದ್ದ ಉಭಯ ತಂಡಗಳು
ಇದಕ್ಕೂ ಮುನ್ನ ಟೂರ್ನಿಯ ಆರಂಭದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟವಾಡಿದವು. ನಂತರ ಕುವೈತ್
ತಂಡ ದಾಳಿ ಮಾಡಿ ವಿಫಲ ಯತ್ನ ನಡೆಸಿತು. ಭಾರತ ತಂಡದ ಡಿಫೆಡಗರ್ಗಳ ಸಹಾಯದಿಂದ ತಡೆನೀಡಿತು.
ಮತ್ತೆ ದಾಳಿಗಿಳಿದ ಕುವೈತ್ 14ನೇ ನಿಮಿಷದಲ್ಲಿ ಅಲ್ ಫೆನೆನಿ ನೆರವಿನಿಂದ ಶಾಬಾಬ್ ಅಲ್ ಖಾಲದಿ
ಗೋಲು ಹೊಡೆದು ಭಾರತಕ್ಕೆ ಆಘಾತ ನೀಡಿದರು. ಎಚ್ಚೆತ್ತ ಭಾರತ 16ನೇ ನಿಮಿಷದಲ್ಲಿ ಚಾಂಗ್ಟೆ ಹೊಡೆದ ಚೆಂಡನ್ನು ಮಾರ್ಕ್ಜೌಕ್ ತಡೆದರು.ನಂತರ ಉಭಯ ತಂಡಗಳು ಸಮಬಲದ ಹೋರಾಟ
ಮುಂದುವರೆಸಿದವು.
38ನೇ ನಿಮಿಷದಲ್ಲಿ ಕುರುನಿಯನ್ ಚೆಂಡನ್ನ ನಾಯಕ ಸುನಿಲ್ ಚೆಟ್ರಿಗೆ ಪಾಸ್ ಮಾಡಿದರು. ಸಹಾಲ್ ಮೂಲಕ ಚೆಂಡನ್ನ ಚಾಂಗ್ಟೆಗೆ ವರ್ಗಾಹಿಸುವಲ್ಲಿ ಚೆಟ್ರಿ ಯಶಸ್ಸು ಕಂಡರು. ಚಾಂಗ್ಟೆ ನೇರವಾಗಿ ಗೋಲು ಹೊಡೆದರು.
ಮೊದಲಾರ್ಧದ ಹೆಚ್ಚುವರಿ ನಿಮಿಷದಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲಲ. ಮೊದಲಾರ್ಧದಲ್ಲಿ ಎರಡೂ ತಂಡಗಳು 1-1 ಗೋಲು ಹೊಡೆದವು.
ಎರಡನೆ ಅವಧಿಯ ಭಾರತ ಗೋಲು ಹೊಡೆಯಲು ಪ್ರಯತ್ನಿಸಿತ್ತಾದರೂ ಪ್ರಯೋಜವಾಗಲಿಲ್ಲ. 62ನೇ ನಿಮಿಷದಲ್ಲಿ ಭಾರತಕ್ಕೆ ಅವಕಾಶವಿತ್ತು. ನಂತರ ನಿಗದಿತ 90 ನಿಮಿಷದಲ್ಲಿ ಗೋಲುಗಳು ದಾಖಲಾಗಲಿಲ್ಲ. 30 ನಿಮಿಷ ಹೆಚ್ಚುವರಿಯಾಗಿ ಆಡಿಸಲಾಯಿತ್ತಾದರೂ ಫಲಿತಾಂಶ ಸಿಗಲಿಲ್ಲ.