SAFF Womens Championship 2022 – ಪಾಕ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ
ಹಾಲಿ ಚಾಂಪಿಯನ್ ಭಾರತ ಮಹಿಳಾ ಫುಟ್ ಬಾಲ್ ತಂಡ SAFF 2022 ಮಹಿಳಾ ಫುಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಕಾಠ್ಮಂಡುವಿನ ದಶರಥ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಘಟಿತ ಆಟವನ್ನಾಡಿದ್ದ ಭಾರತ ಮಹಿಳಾ ತಂಡ 3-0 ಗೋಲು ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.
https://twitter.com/IndianFootball/status/1567443036019490819?ref_src=twsrc%5Etfw%7Ctwcamp%5Etweetembed%7Ctwterm%5E1567443036019490819%7Ctwgr%5E348a1031f8a81da11c928b4caba158aa6742939c%7Ctwcon%5Es1_&ref_url=https%3A%2F%2Findianexpress.com%2Farticle%2Fsports%2Ffootball%2Findia-beat-pakistan-3-0-at-saff-womens-championship-8137890%2F
ಮೊದಲಾರ್ಧದಲ್ಲಿ ಪಾಕಿಸ್ತಾನದ ನಾಯಕಿ ಮರಿಯಾ ಜಮೀಲ್ ಖಾನ್ ಅವರು ಸ್ವಯಂ ಗೋಲಿನಿಂದ ಭಾರತಕ್ಕೆ ಆರಂಭ ಮುನ್ನಡೆ ಸಿಕ್ಕಿತ್ತು. ನಂತರ ಡಂಗ್ಮೇಯ್ ಗ್ರೇಸ್ ಮತ್ತು ಸೌಮ್ಯಾ ಗಗುಲೊಟ್ ತಲಾ ಒಂದೊಂದು ಗೋಲು ಹೊಡೆದು ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದ್ರು.
ಸೆಪ್ಟಂಬರ್ 10ರಂದು ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಭಾರತ ಮಾಲ್ಡೀವ್ಸ್ ತಂಡವನ್ನು ಎದುರಿಸಲಿದೆ. ಹಾಗೇ ಪಾಕಿಸ್ತಾನ ಬಾಂಗ್ಲದೇಶ ತಂಡದ ವಿರುದ್ದ ಕಾದಾಟ ನಡೆಸಲಿದೆ.