ಪಂದ್ಯದ ಕೊನೆಯಲ್ಲಿ ಮಾಡಿದ ಸಣ್ಣ ಯಡವಟ್ಟಿನಿಂದ ಭಾರತ ಫುಟ್ಬಾಲ್ ತಂಡ ಪೂರ್ಣ ಅಂಕ ಕಲೆ ಹಾಕುವಲ್ಲಿ ವಿಫಲರಾಗಿ ಕುವೈತ್ ವಿರುದ್ಧ 1-1 ಅಂಕಗಳಿಂದ ಡ್ರಾ ಸಾಧಿಸಿತು.ತಲಾ 1 ಅಂಕ ಸಂಪಾದಿಸಿ ಉಭಯ ತಂಡಗಳು ಸೆಮಿಫೈನಲ್ ತಲುಪಿದವು.
ಉಭಯ ತಂಡಗಳು ಆಡಿದ 3 ಪಂದ್ಯಗಳಿಂದ ತಲಾ 7 ಅಂಕ ಸಂಪಾದಿಸಿದವು.ಆದರೆ ಗೋಲ್ ಗಳಕೆಯ ಆಧಾರದಲ್ಲಿ ಕುವೈತ್ ಗುಂಪಿನ ಅಗ್ರಸ್ಥಾನಿಯಾಗಿ ಉಪಾಂತ್ಯ ಪ್ರವೇಶಿಸಿತು.
ಭಾರತ ತಂಡ ಕೂಡ ಅಜೇಯ ದಾಖಲೆಯೊಂದಿಗೆ ನಾಲ್ಕರ ಘಟ್ಟ ತಲುಪಿತು.ಪಂದ್ಯದ 90+2ನೇ ನಿಮಿಷದಲ್ಲಿ ಭಾರತದ ಡಿಫೆಂಡರ್ ಅನ್ವರ್ ಉಡುಗೊರೆ ನೀಡಿದ ಕಾರಣ ಕವೈತ್ ಟೂರ್ನಿಯಲ್ಲಿ ಸೋಲಿನಿಂದ ಪಾರಾಯಿತು.
ಟೂರ್ನಿಯಲ್ಲಿ ಸೊಗಸಾದ ಪ್ರದರ್ಶನ ನೀಡುತ್ತಿರುವ ಚೆಟ್ರಿ ಪಡೆ ಕುವೈತ್ ವಿರುದ್ಧವೂ ಅಮೋಘ ಪ್ರದರ್ಶನ್ ನೀಡಿ ಮೊದಲಾರ್ಧ ಮುಗಿಯುವ ಮುನ್ನವೇ ಚೆಟ್ರಿ ಗೋಲು ಬಾರಿಸಿ ಆಘಾತ ನೀಡಿತ್ತು. ಇದು ಚೆಟ್ರಿ ಹೊಡೆದ 92ನೇ ಅಂತಾರಾಷ್ಟ್ರೀಯ ಗೋಲಾಗಿದೆ.ಸ್ಯಾಫ್ ಚಾಂಪಿಯನ್ ಶಿಪ್ನಲ್ಲಿ 24ನೇ ಗೋಲಾಗಿದೆ.
ಮತ್ತೊಂದು ಪಂದ್ಯದಲ್ಲಿ ನೇಪಾಳ ತಂಡ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ.ಪಾಕಿಸ್ತಾನ ವಿರುದ್ಧ 1-0 ಗೋಲಿನಿಂದ ಗೆದ್ದ ಟೂರ್ನಿಗೆ ಗುಡ್ ಬೈ ಹೇಳಿದೆ.