ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ಲೆಬನಾನ್ ತಂಡ ಆತಿಥೇಯ ಭಾರತ ತಂಡವನ್ನು ಎದುರಿಸಲಿದೆ.
ಕಂಠೀರವ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಲೆಬನಾನ್ ತಂಡ ಮಾಲ್ಡೀವ್ಸ್ ತಂಡವನ್ನು 1-0 ಗೋಲಿನಿಂದ ಮಣಿಸಿತು.
ನಾಯಕ ಹಸನ್ ಮಾಟೌಕ್ 24ನೇ ನಿಮಿಷದಲ್ಲಿ ಫ್ರೀಕಿಕ್ ನೆರವಿನಿಂದ ಗೋಲು ಹೊಡೆದರು. ಈ ಗೆಲುವಿನೊಂದಿಗೆ ಲೆಬಾನನ್ ತಂಡ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ
ಲೆಬನಾನ್ ತಂಡ ಭಾರತ ವಿರುದ್ಧ ಸೆಮಿಫೈನಲ್ನಲ್ಲಿ ಸೆಣಸಲಿದೆ.ಇತ್ತೀಚೆಗಷ್ಟೆ ನಡೆದ ಇಂಟರ್ಕಾಂಟಿನೆಂಟಲ್ ಫುಟ್ಬಾಲ್ ಪಂದ್ಯದ ಫೈನಲ್ನಲ್ಲಿ ಭಾರತ ಮತ್ತು ಲೆಬನಾನ್ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿತ್ತು.