ಪಾಕಿಸ್ತಾನ ವಿರುದ್ಧ ಗೋಲಿನ ಮಳೆ ಸುರಿಸಿದ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಇಂದು ನೇಪಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಸುನಿಲ್ ಚೆಟ್ರಿ ಪಡೆ ಸೆಮಿಫೈನಲ್ ಸನಿಹಕ್ಕೆ ಸಾಗಲಿದೆ.
ಇಂದು ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈವರೆಗಿನ ಮುಖಾಮುಖಿಯಲ್ಲಿ ಭಾರತ ತಂಡ ನೇಪಾಳ ವಿರುದ್ಧ 16-2 ಗೆಲುವಿನ ದಾಖಲೆ ಹೊಂದಿದೆ. 2021ರ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ನೇಪಾಳ ವಿರುದ್ಧ 3-0 ಗೋಲುಗಳಿಂದ ಗೆದ್ದುಕೊಂಡಿತು.
ಭಾರತ ನೇಪಾಳ ವಿರುದ್ಧ 6-2 ಗೆಲುವಿನ ದಾಖಲೆ ಹೊಂದಿದೆ. ಇತ್ತೀಚೆಗೆ ನಡೆದ ಇಂಟರ್ಕಾಂಟಿನೆಂಟಲ್ ಕಪ್ನಲ್ಲಿ ಭಾರತ ಬಲಿಷ್ಠ ಲೆಬನಾನ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಪ್ರಾಬಲ್ಯ ಮೆರೆದಿತ್ತು.
ನಂತರ ಪಾಕಿಸ್ತಾನ ವಿರುದ್ಧವೂ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದು 4-0 ಗೋಲುಗಳಿಂದ ಗೆದ್ದುಕೊಂಡಿತ್ತು.ತಂಡದ ಆಟಗಾರ ಇಶಾನ್ ಪಂಡಿತಾ ಗಾಯಗೊಂಡಿದ್ದರಿಂದ ಚೆಟ್ರಿ ನೆರವು ತಂಡಕ್ಕೆ ತುಂಬ ಅಗತ್ಯವಿದೆ.
ಇನ್ನು ನೇಪಾಳ ತಂಡ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಕುವೈತ್ ವಿರುದ್ಧ 1-3 ಗೋಲುಗಳಿಂದ ಸೋತಿತ್ತು. ಹೀಗಾಗಿ ಟೂರ್ನಿಯಲ್ಲಿ ಉಳಿಯಬೇಕಿದ್ದರೆ ಇಂದಿನ ಪಂದ್ಯವನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಸ್ಟಿಮಾಕ್ ಅನುಪಸ್ಥಿಯಲ್ಲಿ ಆಡಲಿದೆ ಭಾರತ
ನೇಪಾಳ ವಿರುದ್ಧದ ಪಂದ್ಯದಲ್ಲಿ ಇಂದು ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಆಡಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಇಗೊರ್ ಸ್ಟಿಮಾಕ್ಗೆ ಕೆಂಪು ಕಾರ್ಡ್ ನೀಡಲಾಗಿತ್ತು. ಡಗ್ಔಟ್ನಲ್ಲಿ ಸಹಾಯಕ ಕೋಚ್ ಮಹೇಶ್ ಗಾವ್ಲಿ ತಂಡದ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಲೆಬನಾನ್ಗೆ ಜಯ
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಲೆಬನಾನ್ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನ ತನ್ನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ಧ 2-0 ಗೊಲುಗಳಿಂದ ಗೆದ್ದು ಬೀಗಿದೆ. ಲೆಬನಾನ್ ಪರ ಹಸನ್ ಮಾಶೌಕ್ 4ನೇ ನಿಮಿಷದಲ್ಲಿ ಗೋಲು ಹೊಡೆದರು. ಎರಡನೆ ಅವಯಲ್ಲಿ ಖಲಿಲ್ ಬಾದರ್ 2ನೇ ಗೋಲು ಹೊಡೆದು ಅಂತರವನ್ನು ಹೆಚ್ಚಿಸಿದರು.
ಮಾಲ್ಡೀವ್ಸ್ಗೆ ಜಯ
ಮತ್ತೊಂದು ಪಂದ್ಯದಲ್ಲಿ ಮಾಲ್ಡೀವ್ಸ್ಗೆ ಭೂತಾನ್ ಸುಲಭ ತ್ತುತಾಗಿದೆ. 2-0 ಗೋಲುಗಳಿಂದ ಭೂತಾನ್ ತಂಡವನ್ನು ಮಾಲ್ಡೀವ್ಸ್ ಸೋಲಿಸಿ ಶುಭಾರಂಭ ಮಾಡಿತು. ಹಮ್ಜಾ ಮೊಹ್ಮದ್ (6ನೇ ನಿಮಿ), ಮತ್ತು ನೈಜ್ ಹಸನ್ (90ನೇ ನಿಮಿ) ಮಾಲ್ಡೀವ್ಸ್ ತಂಡದ ಗೆಲುವಿನ ರೂವಾರಿಯಾದರು.