ಬೌಲಿಂಗ್ ನಲ್ಲಿ ಮಿಂಚಿದ ಸಚಿನ್ ಪುತ್ರ ಅರ್ಜುನ್
ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಗೋವಾ ಮತ್ತು ಹೈದರಾಬಾದ್ ನಡುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಮತ್ತು ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಅದ್ಭುತ ಬೌಲಿಂಗ್ ಮಾಡಿದರು.
ಹೈದರಾಬಾದ್ ವಿರುದ್ಧದ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 10 ರನ್‌ಗಳನ್ನು ನೀಡಿ 4 ವಿಕೆಟ್ಗಳನ್ನು ಪಡೆದರು. ವಿಶೇಷವೆಂದರೆ ಅವರ ಸ್ಪೆಲ್ ನಲ್ಲಿ ಓವರ್ ಮೇಡನ್ ಕೂಡ ಹಾಕಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಗೋವಾ ಆಡುತ್ತಿರುವಾಗ ಅರ್ಜುನ್ ತೆಂಡೂಲ್ಕರ್ ಬಿಗುವಿನ ಬೌಲಿಂಗ್ ಮಾಡಿದರು. ಅವರು ನಾಲ್ಕು ಪ್ರಮುಖ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ದಾರಿ ತೋರಿಸಿದರು. ಪ್ರತೀಕ್ ರೆಡ್ಡಿಯಾಗಿ ಅವರು ತಮ್ಮ ಮೊದಲ ಯಶಸ್ಸನ್ನು ಅರ್ಜುನ್ ಪಡೆದರು. ದಿದೇ ಸಮಯದಲ್ಲಿ ಹೈದರಾಬಾದ್ ಪರ ಸ್ಫೋಟಕ ಇನ್ನಿಂಗ್ಸ್ ಆಡುತ್ತಿದ್ದ ತಿಲಕ್ ವರ್ಮಾ ಅವರನ್ನೂ ಅರ್ಜುನ್ ಖೆಡ್ಡಾ ತೋಡಿದರು.
ರಾಹುಲ್ ಬುದ್ಧಿ (8) ಅವರ ರೂಪದಲ್ಲಿ ಮೂರನೇ ಬಲಿ ಪಡೆದರು. ಇಷ್ಟಕ್ಕೆ ನಿಲ್ಲದ ಅರ್ಜುನ್ ರವಿತೇಜ (4) ನಾಲ್ಕನೇ ಬಲಿಯಾದ. ಇಂದಿನ ಪಂದ್ಯದಲ್ಲಿ ಅರ್ಜುನ್ ಚೆಂಡಿನಲ್ಲಿ ರನ್ ಗಳಿಸುವುದು ತುಂಬಾ ಕಷ್ಟವಾಯಿತು. ಅವರು ತಮ್ಮ ನಾಲ್ಕು ಓವರ್ ಸ್ಪೆಲ್ ನಲ್ಲಿ ಓವರ್ ಮೇಡನ್ ಹಾಕಿದರು. ಇದೇ ಸಮಯದಲ್ಲಿ, ಅವರ ಸ್ಪೆಲ್ನಲ್ಲಿ ಕೇವಲ 10 ರನ್ಗನ್ ಗಳನ್ನು ನೀಡಿದರು. ಅರ್ಜುನ್ ಈ ವರ್ಷದಿಂದಲೇ ಗೋವಾ ಪರ ಆಡಲು ನಿರ್ಧರಿಸಿದ್ದರು. ಈ ಹಿಂದೆ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುಂಚಿತವಾಗಿ, ಅರ್ಜುನ್ ಕೂಡ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರಿಂದ ಬೌಲಿಂಗ್ ತರಬೇತಿಯನ್ನು ಪಡೆದರು.
Sachin, Tendulkar, Arjun, bowling, Goa