ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರದ ರುತುರಾಜ್ ಗಾಯಕ್ವಾಡ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ನಾಲ್ಕೇ ದಿನದಲ್ಲಿ ಅವರು ಮೂರನೇ ಶತಕ ಬಾರಿಸಿದ್ದಾರೆ. ಶನಿವಾರ ರಾಜ್ಕೋಟ್ನಲ್ಲಿ ಮಹಾರಾಷ್ಟ್ರ ಮತ್ತು ಕೇರಳ ನಡುವೆ ನಡೆದ ಪಂದ್ಯದಲ್ಲಿ ಗಾಯಕ್ವಾಡ್ 110 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು 129 ಎಸೆತಗಳಲ್ಲಿ 124 ರನ್ ಗಳಿಸಿದರು. ಇದರಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ಗಳು ಸೇರಿವೆ.
ಈ ಮೊದಲ ಪಂದ್ಯದಲ್ಲಿ ಅವರು ಮಧ್ಯಪ್ರದೇಶ ವಿರುದ್ಧ 112 ಎಸೆತಗಳಲ್ಲಿ 136 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಛತ್ತೀಸ್ ಗಢ ವಿರುದ್ಧ ಅಜೇಯ 154 ರನ್ ಬಾರಿಸಿದ್ದರು. ಇವರು ಮೂರೇ ಪಂದ್ಯಗಳಲ್ಲಿ 414 ರನ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಗಾಯಕ್ವಾಡ್ ಈ ಸರಣಿಯ ಮುಂದಿನ ಪಂದ್ಯದಲ್ಲಿ ಮತ್ತೊಂದು ಶತಕ ಬಾರಿಸಿದರೆ ಸತತ ನಾಲ್ಕು ಶತಕ ಬಾರಿಸಿದವರ ಪಟ್ಟಿಗೆ ಇವರು ಸೇರಿಕೊಂಡಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಪೃಥ್ವಿ ಶಾ ಈ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮಹಾರಾಷ್ಟ್ರ 8 ವಿಕೆಟ್ ನಷ್ಟಕ್ಕೆ 291 ರನ್ ಸೇರಿಸಿದ್ದು, ಇದಕ್ಕುತ್ತರವಾಗಿ ಕೇರಳಾ 48.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 294 ರನ್ ಕಲೆ ಹಾಕಿ ಜಯ ಸಾಧಿಸಿದೆ.