IPLನಲ್ಲಿ ಆರ್ಸಿಬಿ ತಂಡಕ್ಕೆ ಸೋಲು ಹೊಸತಲ್ಲ. ದೊಡ್ಡ ಮೊತ್ತಗಳಿಸಿದ ಮೇಲೂ ಆರ್ಸಿಬಿ ಸಾಕಷ್ಟು ಬಾರಿ ಸೋತಿದೆ. ಆದರೆ ಈ ಬಾರಿ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮೇಲೂ ಎಡವಿದೆ. ಆರ್ಸಿಬಿ ಬೌಲರ್ಗಳು ಬ್ಯಾಟ್ಸ್ಮನ್ಗಳ ಆಟಕ್ಕೆ ಸಾಥ್ ನೀಡಿಲ್ಲ.
2008ರಿಂದ ಆರ್ ಸಿಬಿ ಐಪಿಎಲ್ನಲ್ಲಿ ಆಡುತ್ತಿದೆ. ಆದರೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಆರ್ಸಿಬಿ ಐಪಿಎಲ್ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದೆ. ಆದರೆ ಕಪ್ ಮಾತ್ರ ಗೆದ್ದಿಲ್ಲ. ಐಪಿಎಲ್ನ ಗರಿಷ್ಠ ರನ್ ಸ್ಕೋರರ್ ವಿರಾಟ್ ಕೊಹ್ಲಿ ಆರ್ಸಿಬಿಯ ಭಾಗ. ಎಬಿಡಿ ವಿಲಿಯರ್ಸ್, ಡೇಲ್ ಸ್ಟೈನ್, ಕ್ರಿಸ್ ಗೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೀಗೆ ಘಟಾನುಘಟಿಗಳು ಆರ್ಸಿಬಿ ತಂಡದಲ್ಲಿ ಆಡಿ ಹೋದ್ರೂ ಪ್ರಯೋಜನ ಆಗಿಲ್ಲ. ಆದರೆ ಅಭಿಮಾನಿಗಳು ಮಾತ್ರ ಕಪ್ ಆಸೆ ಇನ್ನೂ ಕೈ ಬಿಟ್ಟಿಲ್ಲ.
ಆರ್ಸಿಬಿ ಐಪಿಎಲ್ನಲ್ಲಿ ದಾಖಲೆಯ 21 ಬಾರಿ 200 ರನ್‌ಗಳ ಗಡಿ ದಾಟಿದೆ. ಆದರೆ 205 ಅನ್ನುವುದು ಆರ್ಸಿಬಿಗೆ ಅನ್ಲಕ್ಕಿ ನಂಬರ್. ನೀವು ನಂಬಿದರೆ ನಂಬಿ, ಬಿಟ್ರೆ ಬಿಡಿ, 205 ರನ್ ಪೇರಿಸಿದ್ದೇ ಆದಲ್ಲಿ ಆರ್ಸಿಬಿ ಗೆದ್ದಿದ್ದಿಲ್ಲ. ಯಾಕಂದರೆ ಅದು ಆರ್ಸಿಬಿ ಫೋಬಿಯಾ.
ಆರ್ಸಿಬಿ 2011ರಲ್ಲಿ ಪಂಜಾಬ್ ವಿರುದ್ಧ 205 ರನ್ಗಳಿಸಿತ್ತು. ಆದರೆ ಆ ಒಂದು ಪಂದ್ಯವನ್ನು ಗೆದ್ದಿದ್ದು ಇತಿಹಾಸ. ಅದಾದ ಮೇಲೆ ಸಿಕ್ಕಿದ್ದೆಲ್ಲವೂ ಸೋಲು
2012 ಮತ್ತು 2018 ರಲ್ಲಿ ಆರ್ಸಿಬಿ ಸಿಎಸ್ಕೆ ವಿರುದ್ಧ 205 ರನ್ಗಳಿಸಿತ್ತು. ಆದರೆ ಆ ಪಂದ್ಯಗಳನ್ನು ಸೋತಿತ್ತು. 2019ರಲ್ಲಿ ಕೆಕೆಆರ್ ವಿರುದ್ಧವೂ ಇದೇ ಗತಿಯಾಗಿತ್ತು. ಈ ಬಾರಿ ಪಂಜಾಬ್ ವಿರುದ್ಧವೂ ಸೋತಿದೆ.
ಹೀಗಾಗಿ ಆರ್ಸಿಬಿ 200 ಪ್ಲಸ್ ರನ್ಗಳನ್ನು ಪ್ರತೀ ಪಂದ್ಯದಲ್ಲೂ ಗಳಿಸಲಿ, ಆದರೆ 205 ರನ್‌ಗಳ ಗಡಿ ದಾಟಲಿ ಅಂತ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಯಾಕಂದರೆ ಆರ್ಸಿಬಿಗೆ 205ರ ಫೋಭಿಯಾ ಇದೆ.