Australia t-20 wolrd cup team- ಟಿ-20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ… ಆಸೀಸ್ ತಂಡದಲ್ಲಿ ಸಿಂಗಾಪುರ ಪ್ಲೇಯರ್..!

2022ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಎಲ್ಲಾ ರೀತಿಯಲ್ಲೂ ರೆಡಿಯಾಗುತ್ತಿದೆ. ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿರುವುದರಿಂದ ಟೂರ್ನಿಗೆ ಒಂಚೂರು ಅಡೆತಡೆಯಾಗದಂತೆ ನೋಡಿಕೊಳ್ಳುತ್ತಿದೆ. ಈ ನಡುವೆ, ಆಸ್ಟ್ರೇಲಿಯಾ ಟಿ-20 ವಿಶ್ವಕಪ್ ತಂಡ ಕೂಡ ಪ್ರಕಟಗೊಂಡಿದೆ.
ಹಾಗೇ ನೋಡಿದ್ರೆ, ಆಸ್ಟ್ರೇಲಿಯಾ ತಂಡದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಏನು ಆಗಿಲ್ಲ. ಬಹುತೇಕ ಕಳೆದ ಬಾರಿಯ ಚಾಂಪಿಯನ್ ತಂಡವನ್ನೇ ಕ್ರಿಕೆಟ್ ಆಸ್ಟ್ರೇಲಿಯಾ ಉಳಿಸಿಕೊಂಡಿದೆ. ಆದ್ರೆ ಒಬ್ಬ ಆಟಗಾರನನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿಯನ್ನು ಕೂಡ ನೀಡಿದೆ.
ಹೌದು, ಆಸ್ಟ್ರೇಲಿಯಾ ತಂಡವನ್ನು ಟೀಮ್ ಡೇವಿಡ್ ಸೇರಿಕೊಂಡಿದ್ದಾರೆ. ಟೀಮ್ ಡೇವಿಡ್ ಅವರು ಮಿಟ್ಚೆಲ್ ಸ್ವೆಪ್ಸನ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ಅಷ್ಟೇ ಅಲ್ಲ, ಟೀಮ್ ಡೇವಿಡ್ ಅವರು ಮೂಲತಃ ಸಿಂಗಾಪುರದವರು. ಸಿಂಗಾಪುರ ಕ್ರಿಕೆಟ್ ನಲ್ಲಿ 14 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಆದ್ರೆ ಡೇವಿಡ್ ಅವರ ಹೆತ್ತವರು ಆಸ್ಟ್ರೇಲಿಯಾದವರು. ಹೀಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಟೀಮ್ ಡೇವಿಡ್ ಅವರು ಸ್ಪೋಟಕ ಬ್ಯಾಟ್ಸ್ ಮೆನ್. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಬಿಗ್ ಬ್ಯಾಶ್ ಲೀಗ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಕೂಡ ಸೆಳೆದಿದ್ದರು.
ಎಂಟನೇ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದ ಏಳು ತಾಣಗಳಲ್ಲಿ ನಡೆಯಲಿದೆ. ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಅಕ್ಟೋಬರ್ 22ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿದೆ.
ಆಸ್ಟ್ರೇಲಿಯಾ ಟಿ-20 ವಿಶ್ವಕಪ್ ತಂಡ
ಆರೋನ್ ಫಿಂಚ್ (ನಾಯಕ), ಆಶ್ಟನ್ ಆಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ಜೋಶ್ ಹ್ಯಾಝಲ್ ವುಡ್, ಮಿಟ್ಚೆಲ್ ಮಾರ್ಶ್, ಗ್ಲೇನ್ ಮ್ಯಾಕ್ಸ್ ವೆಲ್, ಕೇನ್ ರಿಚಡ್ರ್ಸನ್, ಸ್ಟೀವ್ ಸ್ಮಿತ್, ಮಿಟ್ಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವಾಡೆ, ಡೇವಿಡ್ ವಾರ್ನರ್, ಆಡಮ್ ಝಂಪ.