ವಿಶ್ವ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ 15 ವರ್ಷಗಳನ್ನ ಪೂರ್ಣಗೊಳಿಸಿದ್ದಾರೆ. ಒಂದೂವರೆ ದಶಕಗಳಿಂದ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸುತ್ತಾ ಬಂದಿರುವ ʼಹಿಟ್ ಮ್ಯಾನ್ʼ ತಮ್ಮ ಈ ಕ್ರಿಕೆಟ್ ಪಯಣವನ್ನ ಜೀವನದುದ್ದಕ್ಕೂ ಸ್ಮರಿಸುವುದಾಗಿ ತಿಳಿಸಿದ್ದಾರೆ.
ಟೀಂ ಇಂಡಿಯಾದೊಂದಿಗೆ ಪಯಣಕ್ಕೆ 15 ವರ್ಷ ಪೂರ್ಣಗೊಂಡ ಬಗ್ಗೆ ಟ್ವೀಟರ್‌ನಲ್ಲಿ ಪೋಸ್ಟ್‌ವೊಂದನ್ನ ಹಾಕಿರುವ ರೋಹಿತ್ ಶರ್ಮ, “ಇಂದು ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದಲ್ಲಿ 15 ವರ್ಷಗಳನ್ನು ಪೂರೈಸುತ್ತಿದ್ದೇನೆ. ಇದೊಂದು ಅದ್ಭುತ ಜರ್ನಿಯಾಗಿದ್ದು, ಇದನ್ನ ನನ್ನ ಜೀವನದುದ್ದಕ್ಕೂ ಸ್ಮರಿಸುತ್ತೇನೆ. ನನ್ನ ಈ ಪಯಣದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ವಿಶೇಷವಾಗಿ ನಾನು ಈ ಮಟ್ಟದ ಆಟಗಾರನಾಗಿ ರೂಪುಗೊಳ್ಳಲು ಸಹಕರಿಸಿದ ಜನರಿಗೆ ವಿಶೇಷ ಕೃತಜ್ಞತೆ ತಿಳಿಸುತ್ತೇನೆ. ಎಲ್ಲಾ ಕ್ರಿಕೆಟ್ ಪ್ರೇಮಿಗಳು, ಫ್ಯಾನ್ಸ್‌ಗಳು ಹಾಗೂ ಟೀಕಾಕಾರರ ಪ್ರೀತಿ ಮತ್ತು ಸಹಕಾರ ಎಲ್ಲಾ ಅಡೆತಡೆಗಳನ್ನು ದಾಟಿ ಈ ಹಂತಕ್ಕೆ ಬಂದು ನಿಲ್ಲುವಂತೆ ಮಾಡಿದೆ” ಎಂದಿದ್ದಾರೆ.

ಈ ಹಿಂದೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ, ನಾಯಕತ್ವದಿಂದ ಕಳೆಗಿಳಿದ ಬಳಿಕ ರೋಹಿತ್ ಶರ್ಮ ಅವರನ್ನ ಭಾರತ ತಂಡದ ಟಿ20, ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಇತ್ತೀಚಿಗೆ ತವರಿನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ವಿಶ್ರಾಂತಿ ಪಡೆದಿದ್ದ ಹಿಟ್ ಮ್ಯಾನ್, ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ.
35 ವರ್ಷದ ರೋಹಿತ್ ಶರ್ಮ, 2017ರಲ್ಲಿ ಐರ್ಲೆಂಡ್ ವಿರುದ್ಧ ODI ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದರು. ಈವರೆಗೂ 230 ಏಕದಿನ, 125 ಟಿ20 ಹಾಗೂ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಭಾರತದ ಪರ 15733 ರನ್ ಕಲೆಹಾಕಿದ್ದಾರೆ.