ಭಾರತದ ತಾರಾ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಎಟಪಿ ಡಬಲ್ಸ್ ರಾಂಕಿಂಗ್ನಲ್ಲಿ ಏಳನೆ ಸ್ಥಾನಕ್ಕೆ ಜಿಗಿದಿದ್ದಾರೆ. 43 ವರ್ಷದ ರೋಹನ್ ಬೋಪಣ್ಣ ಮೊನ್ನೆ ಮುಕ್ತಾಯವಾದ ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ವರೆಗೂ ಆಡಿದ್ದರು.
ಇದೀಗ 10 ವರ್ಷದ ಬಳಿಕ ರೋಹನ್ ಬೋಪಣ್ಣ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಏಳು ವರ್ಷದ ನಂತರ ರೋಹನ್ ಬೋಪಣ್ಣ ಡಬಲ್ಸ್ನಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಮ್ಯಾಡ್ರಿಡ್ನಲ್ಲಿ ನಡೆದ ಎಟಿಪಿ 100 ಮಾಸ್ಟರ್ಸ್ನಲ್ಲಿ ಫೈನಲ್ ತಲುಪಿತ್ತು. ಪುರುಷರ ಸಿಂಗಲ್ಸ್ನಲ್ಲಿ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಎಟಿಪಿ ರಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಂಬಲ್ಡನ್ ಚಾಂಪಿಯನ್ ವೊಂಡ್ರೊಸೊವಾ 32 ಸ್ಥಾನ ಜಿಗಿದು ಡಬ್ಲ್ಯುಟಿಎ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದು ವೃತ್ತಿ ಜೀವನದ ಶ್ರೇಷ್ಠ ಸಾಧನೆ ಇದಾಗಿದೆ.