ಐಪಿಎಲ್ 2022 ರ 12 ಇನ್ನಿಂಗ್ಸ್‌ಗಳಲ್ಲಿ 200 ಸ್ಟ್ರೈಕ್ ರೇಟ್ ಮತ್ತು 68 ರ ಸರಾಸರಿಯಲ್ಲಿ 274 ರನ್ ಗಳಿಸಿರುವ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದು, ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಉತ್ಸುಕದಲ್ಲಿದ್ದಾರೆ. ಇವರ ಲಯದ ಕಾರಣದಿಂದ ಟೀಮ್ ಇಂಡಿಯಾದ ಖಾಯಂ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಭಯ ಶುರುವಾಗಿದೆ.
ಪ್ರಸಕ್ತ ಐಪಿಎಲ್ ನ ಡೆತ್ ಓವರ್ ಗಳಲ್ಲಿ ದಿನೇಶ್ ಕ್ರೀಸ್ ನಲ್ಲಿದ್ದರೆ, ರನ್ ಗಳ ಮಳೆ ಸುರಿಸಿದ್ದಾರೆ. ಅನುಭವಿ ಬೌಲರ್‌ಗಳು ಡಿಕೆ ಅವರ ಬ್ಯಾಟಿಂಗ್‌ನ ಮುಂದೆ ಮಂಡಿ ಊರುತ್ತಿದ್ದಾರೆ. ಇವರ ಪ್ರದರ್ಶನ ನೋಡಿದರೆ ಡಿಕೆ ಟಿ-20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಬಹದು ಎಂಬ ನಿರೀಕ್ಷೆಗಳು ಆರಂಭವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸದ್ಯದ ಪ್ರದರ್ಶನದ ಆಧಾರದಲ್ಲಿ ರಿಷಬ್ ಪಂತ್ ಗಿಂತ ದಿನೇಶ್ ಕಾರ್ತಿಕ್ ಗೆ ಆದ್ಯತೆ ನೀಡಬಹುದು.

ಮುಖ್ಯ ವಿಷಯವೆಂದರೆ ವೇಗವಾಗಿ ಬ್ಯಾಟ್ ಮಾಡುವುದು ಮತ್ತು ಕೇವಲ ರನ್ ಸೇರಿಸುವುದು ಮಾತ್ರವಲ್ಲ, ದಿನೇಶ್ ಕಾರ್ತಿಕ್ ಆರ್‌ಸಿಬಿ ಜಯಿಸಿದ ಎಲ್ಲಾ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಈ ನಾಟೌಟ್ ಇನ್ನಿಂಗ್ಸ್‌ಗಳಲ್ಲಿ ಅವರು 202 ಸ್ಟ್ರೈಕ್ ರೇಟ್‌ನಲ್ಲಿ 200 ರನ್ ಗಳಿಸಿದ್ದಾರೆ. ಸನ್‌ರೈಸರ್ಸ್ ಬೌಲಿಂಗ್ ದಾಳಿಯನ್ನು ಪ್ರಬಲವೆಂದು ಪರಿಗಣಿಸಲಾಗಿದೆ. ಆದರೆ ಅವರ ವಿರುದ್ಧವೂ ಈ ಸ್ಟಾರ್ ಬ್ಯಾಟ್ಸ್‌ಮನ್ 8 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿ ಅಬ್ಬರಿಸಿದ್ದಾರೆ.
ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ತಂಡದಲ್ಲಿ ದಿನೇಶ್ ಇರಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಬೇಡಿಕೆ ಇಡುತ್ತಿದ್ದಾರೆ. 2004ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್ ಹಲವು ಬಾರಿ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ಒಂದೆಡೆ ದಿನೇಶ್ ಕಾರ್ತಿಕ್ ತಮ್ಮ ಸ್ಥಿರ ಪ್ರದರ್ಶನದಿಂದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಬಲವಾದ ಹಕ್ಕು ಮಂಡಿಸುತ್ತಿದ್ದಾರೆ. ಇನ್ನೊಂದೆಡೆ, ರಿಷಬ್ ಪಂತ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ಬ್ಯಾಟಿಂಗ್‌ನಲ್ಲಿ ಅವರ ನೀರಸ ಪ್ರದರ್ಶನದ ನಡುವೆ ಅವರು ವಿವಾದಗಳಿಂದ ಖಂಡಿತವಾಗಿಯೂ ಸುದ್ದಿ ಮಾಡುತ್ತಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಆಡುವ ಪಂತ್ ಐಪಿಎಲ್‌ನಲ್ಲಿ ಇದುವರೆಗೆ ಒಂದೇ ಒಂದು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿಲ್ಲ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನೋ ಬಾಲ್ ನೀಡದಿದ್ದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಹಿಂತಿರುಗಿ ಎಂದು ಪಂತ್ ಸೂಚಿಸಿದ ರೀತಿ ಪಂತ್ ಇಮೇಜ್‌ಗೆ ಧಕ್ಕೆಯಾಗಿದೆ. ಒಂದು ವೇಳೆ ಐಪಿಎಲ್ 15ರ ಗುಂಪು ಹಂತದ ಉಳಿದ 3 ಪಂದ್ಯಗಳಲ್ಲಿ ಪಂತ್ ಲಯಕ್ಕೆ ಮರಳದಿದ್ದರೆ, ಟಿ20 ವಿಶ್ವಕಪ್‌ನಲ್ಲಿ ಅವರ ಆಯ್ಕೆ ಪ್ರಶ್ನಾರ್ಥಕ ಚಿಹ್ನೆಯಾಗಬಹುದು.
ಡಿಕೆಶಿ ಈ ವರ್ಷ ಆರ್‌ಸಿಬಿಗೆ ಬ್ಯಾಟಿಂಗ್ ಗೆ ಬಲ ತುಂಬಿದ್ದಾರೆ. 36 ವರ್ಷದ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿನಿಶರ್ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಇದಕ್ಕಾಗಿ ಡಿಕೆ ಕೂಡ ನಿರಂತರ ಅಭ್ಯಾಸ ನಡೆಸುತ್ತಿರುವುದನ್ನು ನೋಡಿದ್ದೇವೆ. ಸ್ಪರ್ಧೆಯಲ್ಲಿ ಕನಿಷ್ಠ 100 ರನ್ ಗಳಿಸಿದ ಆಟಗಾರರ ಪೈಕಿ ದಿನೇಶ್ ಕಾರ್ತಿಕ್ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ.