Sourav Ganguly – ಈತನೇ ಟೀಮ್ ಇಂಡಿಯಾದ ಪಾಂಡು..! ಗಂಗೂಲಿ ಹೇಳಿದ್ಯಾರಿಗೆ ?

ಟೀಮ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಮೂರನೇ ಬಾರಿ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ಜುಲೈ 17ರಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಬಳಗ ಐದು ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿತ್ತು.
ಈ ಮೂಲಕ ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು 2-2ರಿಂದ ಸಮಬಲಗೊಳಿಸಿದ್ರೆ, ಟಿ-20 ಮತ್ತು ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದು ರಿಷಬ್ ಪಂತ್. ರಿಷಬ್ ಪಂತ್ ಅಜೇಯ 125 ರನ್ ಸಿಡಿಸಿದ್ರೆ, ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಆಟವನ್ನು ಆಡಿದ್ರು. ರವೀಂದ್ರ ಜಡೇಜಾ ಅದ್ಭುತ ಎರಡು ಕ್ಯಾಚ್ ಗಳನ್ನು ಹಿಡಿದು ಪಂದ್ಯದ ಗತಿಯನ್ನು ಬದಲಾಯಿಸಿದ್ರು.

ಟೀಮ್ ಇಂಡಿಯಾದ ಐತಿಹಾಸಿಕ ಸರಣಿ ಗೆಲುವಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟೀಮ್ ಇಂಡಿಯಾದ ಗೆಲುವಿನ ಬಗ್ಗೆ ಗಂಗೂಲಿಯವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಚ್ಚರಿ ಅಂದ್ರೆ ಈ ಟ್ವಿಟ್ ನಲ್ಲಿ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿಯವರ ಹೆಸರನ್ನು ಕೂಡ ಪ್ರಸ್ತಾಪ ಮಾಡಿದ್ದಾರೆ.
ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾ ಅದ್ಭುತವಾದ ಪ್ರದರ್ಶನವನ್ನು ನೀಡಿದೆ. ಇಂಗ್ಲೆಂಡ್ ನೆಲದಲ್ಲಿ ಗೆಲುವುದು ಸಾಧಿಸುವುದು ಸುಲಭದ ಸಂಗತಿಯಲ್ಲ. ಟೆಸ್ಟ್ ಸರಣಿಯಲ್ಲಿ 2-2ರಿಂದ ಸಮಬಲ, ಟಿ-20 ಮತ್ತು ಏಕದಿನ ಸರಣಿಯ ಗೆಲುವು. ವೆಲ್ ಡನ್, ದ್ರಾವಿಡ್, ರೋಹಿತ್, ರವಿಶಾಸ್ತ್ರಿ, ವಿರಾಟ್ ಕೊಹ್ಲಿ. ಪಂತ್ ಸ್ಪೇಷಲ್ ಪ್ಲೇಯರ್. ಪಾಂಡು.. ಎಂದು ಗಂಗೂಲಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದ್ರೆ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಬೇಕಿದೆ. ಟಾರ್ಗೆಟ್ ಟಿ-20 ವಿಶ್ವಕಪ್ 2022