Rishab Pant – ಮ್ಯಾಚ್ ವಿನ್ನಿಂಗ್ ಆಟಕ್ಕೆ ಸೆಹ್ವಾಗ್ ಫಿದಾ..!

ರಿಷಬ್ ಪಂತ್ ಗುಣಗಾನ ಇನ್ನೂ ಮುಗಿದಿಲ್ಲ. ಸದ್ಯಕ್ಕಂತೂ ಮುಗಿಯುವುದು ಇಲ್ಲ. ಯಾಕಂದ್ರೆ ಚೊಚ್ಚಲ ಏಕದಿನ ಶತಕದ ವೈಖರಿಯೇ ಅದ್ಭುತವಾಗಿತ್ತು. ಈ ಶತಕವನ್ನು ರಿಷಬ್ ಪಂತ್ ಅವರಂತೂ ತನ್ನ ಬದುಕಿನಲ್ಲೇ ಎಂದಿಗೂ ಮರೆಯುವುದಿಲ್ಲ.
ಬಹುತೇಕ ಮಂದಿಗೆ ರಿಷಬ್ ಪಂತ್ ಅವರ ಬ್ಯಾಟಿಂಗ್‍ನ ಮತ್ತೊಂದು ಮುಖವಾಡ ಗೊತ್ತಾಗಿತ್ತು. ಇಷ್ಟು ದಿನ ರಿಷಬ್ ಪಂತ್ ಅಂದ್ರೆ ಹೊಡಿಬಡಿ ಆಟ. ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಳ್ಳುತ್ತಾರೆ ಅಂತ ಚೆನ್ನಾಗಿಯೇ ಗೊತ್ತಿತ್ತು.
ಆದ್ರೆ ರಿಷಬ್ ಪಂತ್ ಅವರಿಗೂ ಜವಾಬ್ದಾರಿ ಮತ್ತು ತಾಳ್ಮೆಯ ಆಟವನ್ನಾಡಲು ಬರುತ್ತೆ ಅನ್ನೋದಕ್ಕೆ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವೇ ಸಾಕ್ಷಿ.
ಸೋಲಿನ ಭೀತಿಗೆ ಸಿಲುಕಿದ್ದ ತಂಡಕ್ಕೆ ಗೆಲುವಿವ ಸುವಾಸನೆ ಮೂಡುವಂತೆ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಹಲವಾರು ಬಾರಿ ಮಾಡಿದ್ದಾರೆ.
ಆದ್ರೆ ಏಕದಿನ ಕ್ರಿಕೆಟ್ ನಲ್ಲಿ ಇಷ್ಟೊಂದು ಸೊಗಸಾಗಿ ಆಡಿದ್ದು ಇದೇ ಮೊದಲು. ಈ ಹಿಂದೆ 27 ಏಕದಿನ ಪಂದ್ಯಗಳನ್ನು ಆಡಿದ್ರೂ ದಾಖಲಿಸಿದ್ದು ಬರೀ ಐದು ಅರ್ಧಶತಕಗಳನ್ನು ಮಾತ್ರ. ಸ್ಟ್ರೈಕ್ ರೇಟ್ ಕೂಡ ಅಷ್ಟೇನೂ ಉತ್ತಮವಾಗಿರಲಿಲ್ಲ.

ಈ ನಡುವೆ, ಟಿ-20 ಕ್ರಿಕೆಟ್ ನಲ್ಲೂ ರಿಷಬ್ ಪಂತ್ ಜಾಸ್ತಿ ಆರ್ಭಟಿಸಿಲ್ಲ. ಹಾಗೇ ನೋಡಿದ್ರೆ, ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಂತ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಕೂಡ ಅನುಮಾನವಾಗಿತ್ತು.
ಆದ್ರೆ ಇಂಗ್ಲೆಂಡ್ ಪ್ರವಾಸದಲ್ಲಿ ದಾಖಲಿಸಿದ್ದ ಎರಡು ಶತಕಗಳು ರಿಷಬ್ ಪಂತ್ ಅವರ ಸ್ಥಾನವನ್ನು ಭದ್ರವನ್ನಾಗಿಸಿವೆ.
ಅಂದ ಹಾಗೇ ರಿಷಬ್ ಪಂತ್ ಅವರ ಪ್ರಚಂಡ ಆಟಕ್ಕೆ ಕ್ರಿಕೆಟ್ ಪಂಡಿತರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಈಗ ವಿರೇಂದ್ರ ಸೆಹ್ವಾಗ್ ಹೊಸ ಸೇರ್ಪಡೆ.
ಒಂದು ವೇಳೆ ರಿಷಬ್ ಪಂತ್ ಅವರು ವೀರೇಂದ್ರ ಸೆಹ್ವಾಗ್ ಮಾತು ಕೇಳಿದ್ರೆ ಮತ್ತೆ ಎಡವಟ್ಟು ಮಾಡಿಕೊಳ್ಳಬಹುದು. ಯಾಕಂದ್ರೆ ಸೆಹ್ವಾಗ್ ಹೇಳಿಕೆ ಪಂತ್ ಅವರನ್ನು ಮುಂದಿನ ಪಂದ್ಯಗಳಲ್ಲಿ ಟೆಂಪ್ಟ್ ಮಾಡುವ ರೀತಿಯಲ್ಲಿದೆ.
ಹೌದು, ಎಲ್ಲರಿಗೂ ಗೊತ್ತಿರುವ ಹಾಗೇ ರಿಷಬ್ ಪಂತ್ ಶತಕದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಗೆ ಮುಂದಾದ್ರು. ಕೇವಲ ಏಳು ಎಸೆತಗಳಲ್ಲಿ 25 ರನ್ ಸಿಡಿಸಿದ್ದರು. ಅದರಲ್ಲೂ ಡೇವಿಡ್ ವಿಲ್ಲೆ ಅವರ ಓವರ್ ನ ಐದು ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿದ್ರು,.
ಈ ವಿಚಾರವಾಗಿ ಮಾತನಾಡಿರುವ ಸೆಹ್ವಾಗ್, ಒಂದು ವೇಳೆ ನಾನು ಪಂತ್ ಜಾಗದಲ್ಲಿ ಇರುತ್ತಿದ್ರೆ, ಡೇವಿಡ್ ವಿಲ್ಲೆ ಅವರ ಕೊನೆಯ ಎಸೆತವನ್ನು ಕೂಡ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ನಿಜ, ರಿಷಬ್ ಪಂತ್ ಮನಸ್ಸು ಮಾಡಿದ್ರೆ ಡೇವಿಡ್ ವಿಲ್ಲೆ ಅವರ ಕೊನೆಯ ಎಸೆತವನ್ನೂ ಹೊಡೆಯಬಹುದಿತ್ತು. ಆದ್ರೆ ಆ ಎಸೆತ ಸ್ವಲ್ಪ ಉತ್ತಮವಾಗಿತ್ತು. ಹೀಗಾಗಿ ಸ್ಟ್ರೈಕ್ ರೊಟೇಡ್ ಮಾಡುವ ನಿರ್ಧಾರ ತಗೊಂಡ್ರು. ಬೌಲರ್ ಗೂ ಗೌರವ ಕೊಡಬೇಕು ಎಂಬ ಮಾತು ರಿಷಬ್ ಪಂತ್ ಮನದಲ್ಲಿ ಮೂಡಿತ್ತೋ ಏನೋ. ಅದು ಅಲ್ಲದೆ ಅಜೇಯ ರಾಗಿ ಪಂದ್ಯವನ್ನು ಮುಗಿಸಬೇಕು ಎಂಬ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಕಾರಣ ರಿಷಬ್ ಪಂತ್ ದೊಡ್ಡ ಹೊಡೆತಕ್ಕೆ ಮುಂದಾಗಲಿಲ್ಲ.
ಒಂದಂತೂ ಸತ್ಯ ರಿಷಬ್ ಪಂತ್ ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡಂತೆ ಕಾಣುತ್ತಿದೆ. ಹೀಗೆ ಇದನ್ನು ಮುಂದುವರಿಸಿದ್ರೆ ಅವರಿಗೂ ಒಳ್ಳೆಯದ್ದು. ಟೀಮ್ ಇಂಡಿಯಾಗಂತೂ ತುಂಬಾನೇ ಪ್ಲಸ್ ಪಾಯಿಂಟ್ ಆಗಲಿದೆ.

ನಾವು ರಿಷಬ್ ಪಂತ್ ಅವರಿಂದ ಏಕದಿನ ಕ್ರಿಕೆಟ್ ನಲ್ಲೂ ಈ ರೀತಿಯ ಇನಿಂಗ್ಸ್ ಅನ್ನು ನಿರೀಕ್ಷೆ ಮಾಡುತ್ತಿದ್ದೇವು. ರಿಷಬ್ ಪಂತ್ ಅದ್ಭುತವಾಗಿಯೇ ಆಡಿದ್ರು. ಅದಕ್ಕಿಂತಲೂ ಒಳ್ಳೆಯ ಸಂಗತಿ ಅಂದ್ರೆ ಮ್ಯಾಚ್ ವಿನ್ನಿಂಗ್ ಆಟವನ್ನು ಆಡಿದ್ದು. ಅದರಲ್ಲೂ ಬೌಂಡರಿ ದಾಖಲಿಸುವ ಮೂಲಕ ಗೆಲುವಿನ ರನ್ ಗಳಿಸಿದ್ದನ್ನು ನೋಡಲು ತುಂಬಾ ಮಜವಾಗಿತ್ತು ಎಂದು ಸೆಹ್ವಾಗ್ ಅವರು ರಿಷಬ್ ಪಂತ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.