ಟೆನಿಸ್ ಗೆ ಗೂಡ್ ಬಾಯ್ ಹೇಳಿದ್ದ ಬಾರ್ಟಿ ಈ ಕ್ರೀಡೆಯತ್ತ ಮುಖ
ಕೆಲವೇ ತಿಂಗಳುಗಳ ಹಿಂದೆ, ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಆಶ್ಲೀ ಬಾರ್ಟಿ ಕೇವಲ 25 ನೇ ವಯಸ್ಸಿನಲ್ಲಿ ಟೆನಿಸ್‌ನಿಂದ ನಿವೃತ್ತಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಈಗ ಅವರು ಮತ್ತೊಂದು ಕ್ರೀಡೆಯತ್ತ ಮುಖ ಮಾಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗೆದ್ದ 6 ವಾರಗಳ ನಂತರ ಬಾರ್ಟಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆಶ್ಲೀಗ್ ಬಾರ್ಟಿ 44 ವರ್ಷಗಳ ನಂತರ ಗ್ರ್ಯಾಂಡ್ ಸ್ಲಾಮ್ ಗೆದ್ದ ಮೊದಲ ಆಸ್ಟ್ರೇಲಿಯಾದ ಆಟಗಾರ್ತಿ ಎನೆಸಿಕೊಂಡಿದ್ದರು. ಈಗ ಮತ್ತೊಮ್ಮೆ ಮೈದಾನಕ್ಕೆ ಮರಳಲಿದ್ದಾರೆ. ಆದರೆ ಈ ಬಾರಿ ಟೆನಿಸ್ ಮತ್ತು ಕ್ರಿಕೆಟ್ ಅಂಗಳಕ್ಕೆ ಅಲ್ಲವೇ ಅಲ್ಲ. ಆದರೆ ಈಗ ಅವರು ಗ್ಲೋಬಲ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಾರೆ.

ಆಶ್ಲೀಗ್ ಬಾರ್ಟಿ ಇತ್ತೀಚೆಗೆ ಬ್ರೂಕ್‌ವಾಟರ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್ ಗೆದ್ದರು. 2020 ರಲ್ಲಿ ಬ್ರಿಸ್ಬೇನ್ ಬಳಿ ಬ್ರೂಕ್‌ವಾಟರ್ ಗಾಲ್ಫ್ ಕ್ಲಬ್ ಮಹಿಳಾ ಪ್ರಶಸ್ತಿಯನ್ನು ಗೆದ್ದಿದ್ದರು. ಮತ್ತು ಏಪ್ರಿಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಐಕಾನ್ ಸರಣಿ ಪ್ರದರ್ಶನವನ್ನು ಆಡುವುದು ಬಾರ್ಟಿ ಗಾಲ್ಫ್‌ನೊಂದಿಗೆ ಕ್ರೀಡೆಗೆ ಮರಳಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಪ್ರತಿಭಾವಂತ ಬಾರ್ಟಿ ವೃತ್ತಿಪರ ಟೆನಿಸ್ ಆಟಗಾರ್ತಿ ಮತ್ತು ಉತ್ತಮ ಕ್ರಿಕೆಟಿಗರಾಗಿದ್ದಾರೆ.

ಬಾರ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ‘ಇಂದು ನನಗೆ ಕಷ್ಟದ ದಿನವಾಗಿದೆ ಏಕೆಂದರೆ ನಾನು ಟೆನಿಸ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ಕ್ರೀಡೆಯು ನನಗೆ ನೀಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಮತ್ತು ಹೆಮ್ಮೆಪಡುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು’ಎಂದು ನಿವೃತ್ತಿಯ ಬಳಿಕ ಬರೆದುಕೊಂಡಿದ್ದರು.

ಬಾರ್ಟಿ ಈ ರೀತಿ ಟೆನಿಸ್ ತೊರೆದಿದ್ದು ಇದೇ ಮೊದಲಲ್ಲ. ಅವರು 2011 ರಲ್ಲಿ 15 ನೇ ವಯಸ್ಸಿನಲ್ಲಿ ವಿಂಬಲ್ಡನ್ ಜೂನಿಯರ್ ಚಾಂಪಿಯನ್ ಆದರು ಮತ್ತು ಉಜ್ವಲ ವೃತ್ತಿಜೀವನವನ್ನು ಹೊಂದಿದ್ದರು. ಆದರೆ 2014 ರಲ್ಲಿ ಅವರು ಆಯಾಸ, ಒತ್ತಡ ಮತ್ತು ದೀರ್ಘ ಪ್ರಯಾಣದ ಕಾರಣದಿಂದ ಎರಡು ವರ್ಷಗಳ ಕಾಲ ಕ್ರೀಡೆಯಿಂದ ದೂರವಿದ್ದರು. ಅವರು ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ವೃತ್ತಿಪರ ಕ್ರಿಕೆಟ್ ಆಡಲು ಹೋದರು, ಆದರೆ ನಂತರ ಟೆನಿಸ್‌ಗೆ ಮರಳಿದರು.

ಬಾರ್ಟಿ ಈ ವರ್ಷದ ಮಾರ್ಚ್‌ನಲ್ಲಿ ನಿವೃತ್ತಿ ಘೋಷಿಸಿದ್ದರು. ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಇಂತಹ ಹೆಜ್ಜೆ ಇಟ್ಟಿದ್ದರು. ಕಳೆದ ವರ್ಷ ನಿವೃತ್ತಿಯಾಗುವ ಮೊದಲು, ಅವರು ತಮ್ಮ ದೀರ್ಘಕಾಲದ ಗೆಳೆಯ ಗ್ಯಾರಿ ಕಿಸಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ನಿವೃತ್ತಿಯ ನಂತರ, ‘ಲಿಟಲ್ ಆಶ್’ ಮಕ್ಕಳ ಪುಸ್ತಕಗಳ ಸರಣಿಯಲ್ಲಿ ಬಾರ್ಟಿ ಕೆಲಸ ಮಾಡುತ್ತಿದ್ದಾರೆ.”ಮಕ್ಕಳ ಶಿಕ್ಷಣವನ್ನು ಬೆಂಬಲಿಸುವುದು ನನಗೆ ಆಸಕ್ತಿಯ ವಿಷಯವಾಗಿದೆ ಮತ್ತು ಹೊಸ ಓದುಗರನ್ನು ಪ್ರೋತ್ಸಾಹಿಸಲು ನಾನು ಸಹಾಯ ಮಾಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ” ಎಂದಿದ್ದಾರೆ.
Retired, Tennis, Ashleigh Barty, Golf