Durand Cup Footballa 2022- ಸೆಪ್ಟಂಬರ್ 9ರಿಂದ ನಡೆಯಲಿವೆ ಕ್ವಾರ್ಟರ್ ಫೈನಲ್ ಪಂದ್ಯಗಳು.. ಯಾರು ಯಾರ ವಿರುದ್ದ ?
ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಮಹಮ್ಮದನ್ ಸ್ಪೋಟ್ಸ್ರ್ಸ್ ಕ್ಲಬ್ ಮತ್ತು ಬೆಂಗಳೂರು ಫುಟ್ ಬಾಲ್ ಕ್ಲಬ್ ಎ ಬಣದಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಹಾಗೇ, ಬಿ ಬಣದಿಂದ ಎಟಿಕೆ ಮೋಹನ್ ಬಾಗನ್ ಮತ್ತು ಇಂಡಿಯನ್ ನೇವಿ ತಂಡಗಳು ಮತ್ತು ಸಿ ಬಣದಿಂದ ಹೈದ್ರಬಾದ್ ಫುಟ್ ಬಾಲ್ ಕ್ಲಬ್ ಮತ್ತು ಚೆನ್ನೈಯಿನ್ ತಂಡಗಳು ಹಾಗೂ ಡಿ ಬಣದಿಂದ ಒಡಿಸ್ಸಾ ಫುಟ್ ಬಾಲ್ ಕ್ಲಬ್ ಮತ್ತು ಕೇರಳ ಬ್ಲ್ಯಾಸ್ಟರ್ಸ್ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಸೆಪ್ಟಂಬರ್ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲಿ ಅಂದ್ರೆ ಸೆಪ್ಟಂಬರ್ 9ರಂದು ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ಮತ್ತು ಕೇರಳ ಬ್ಲ್ಯಾಸ್ಟರ್ಸ್ ತಂಡಳು ಕಾದಾಟ ನಡೆಸಲಿವೆ.
ಸೆಪ್ಟಂಬರ್ 10ರಂದು ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಒಡಿಸ್ಸಾ ಫುಟ್ ಬಾಲ್ ಕ್ಲಬ್ ತಂಡಗಳು ಸೆಣಸಾಟ ನಡೆಸಲಿವೆ.
ಸೆಪ್ಟಂಬರ್ 11ರಂದು ಮುಂಬೈ ಸಿಟಿ ಫುಟ್ ಬಾಲ್ ಕ್ಲಬ್ ಮತ್ತು ಚೆನ್ನೈಯಿನ್ ತಂಡಗಳು ಮುಖಾಮುಖಿಯಾಗಲಿವೆ.
ಸೆಪ್ಟಂಬರ್ 12ರಂದು ಹೈದ್ರಬಾದ್ ಫುಟ್ ಬಾಲ್ ಕ್ಲಬ್ ಮತ್ತು ರಾಜಸ್ತಾನ ಯುನೈಟೆಡ್ ತಂಡಗಳು ಹೋರಾಟ ನಡೆಸಲಿವೆ. ಬಳಿಕ ಸೆಮಿಫೈನಲ್ ಪಂದ್ಯ ನಡೆಯಲಿದ್ದು,.
ಸೆಪ್ಟಂಬರ್ 18ರಂದು ಫೈನಲ್ ಪಂದ್ಯ ನಡೆಯಲಿದೆ.
Durand Cup Footballa 2022, ATK Mohun Bagan, Bengaluru fc, Mohammedan sc, Mumbai City, Hyderabad fc, Chennaiyin fc, Odisha fc ,Kerala Blasters ,Rajasthan United