La Liga: ಗೆದ್ದ ರಿಯಲ್ ಮ್ಯಾಡ್ರಿಡ್ ಗೆ ಅಗ್ರ ಸ್ಥಾನ
ಲಾ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ 4-1 ರಿಂದ ರಿಯಲ್ ಮಲ್ಲೋರ್ಕ್ ತಂಡವನ್ನು ಮಣಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
ರಿಯಲ್ ಮ್ಯಾಡ್ರಿಡ್ ತಂಡದ ಪರ ಎಫ್. ವಾಲ್ವರ್ಡೆ (45+3) ವಿನಿಷಿಯಸ್ ಜೂನಿಯರ್ (72) ರೊಡ್ರಿಗೊ (89) ಎ. ರೂಡಿಗರ್ (90+3) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ರಿಯಲ್ ಮ್ಯಾಡ್ರಿಡ್ ಆಡಿದ 5ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 15 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಬಾರ್ಸಿಲೋನಾ ಇಷ್ಟೇ ಪಂದ್ಯಗಳಲ್ಲಿ 4 ಜಯ, 1 ಡ್ರಾ ಸಾಧಿಸಿದ್ದು, 13 ಅಂಕಗಳನ್ನು ಕಲೆ ಹಾಕಿದೆ.
ಮೊದಲಾವಧಿಯಲ್ಲಿ ಮಲ್ಲೋರ್ಕ್ ತಂಡದ ಪರ ವಿ. ಮುರಿಕಿ 35ನೇ ನಿಮಿದಲ್ಲಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಇದೇ ಅವಧಿಯ ಹೆಚ್ಚುವರಿ ಸಮಯದಲ್ಲಿ ಎಫ್. ವಾಲ್ವರ್ಡೆ ಸೊಗಸಾದ ಕಾಲ್ಚಳಕದ ಪ್ರದರ್ಶನ ನೀಡಿ ಗೋಲು ದಾಖಲಿಸಿದರು. ಪರಿಣಾಮ ರಿಯಲ್ ಮ್ಯಾಡ್ರಿಡ್ ಸಮಬಲ ಸಾಧಿಸಿತು.
ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಉಭಯ ತಂಡದ ಆಟಗಾರರು ಗೋಲು ನೀಡದಂತೆ ತಡೆಯಬೇಕೆಂಬ ಯೋಜನೆ ಹಾಕಿಕೊಂಡಿದ್ದರು. ಆದರೆ ರಿಯಲ್ ಮ್ಯಾಡ್ರಿಡ್ ತಂಡ ಎದುರಾಳಿ ತಂಡದ ರಕ್ಷಣಾ ವಿಭಾಗಕ್ಕೆ ಮಣ್ಣು ಮುಕ್ಕಿಸಿ ಗೋಲು ಬಾರಿಸಿದರು. ತಂಡದ ಪರ ವಿನಿಷಿಯಸ್ ಜೂನಿಯರ್ (72ನೇ ನಿಮಿಷ) ರೊಡ್ರಿಗೊ (89ನೇ ನಿಮಿಷ) ಎ. ರೂಡಿಗರ್ (90+3ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು.
Real Madrid, Real Mallorca, Barcelona, La Liga