ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಅವರ ದಾಖಲೆಯ 172 ರನ್ ಗಳ ಜತೆಯಾಟದ ನೆರವಿನಿಂದ ಆರ್ಸಿಬಿ ಸನ್ ರೈಸರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಆರ್ಸಿಬಿ ಪ್ಲೇ ಆಫ್ಗೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಉಪ್ಪಾಳ ಮೈದಾದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಆರ್ಸಿಬಿ 19.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.
ಬೃಹತ್ ಮೊತ್ತ ಬೆನ್ನತ್ತಿದ ಆರ್ಸಿಬಿಗೆ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ನೀಡಿದರು. ಪವರ್ ಪ್ಲೇ ಈ ಜೋಡಿ 64 ರನ್ ಸೇರಿಸಿತು. 10 ಓವರ್ ವೇಳೆಗೆ 95 ರನ್ ಗಳಿಸಿತು.
ವಿರಾಟ್ ಕೊಹ್ಲಿ 100 ರನ್ ಹೊಡೆಯುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 6ನೇ ಶತಕ ಹೊಡೆದು ಗೇಲ್ ದಾಖಲೆ ಸರಿಗಟ್ಟಿದರು. ಟಿ20ಯಲ್ಲಿ ಒಟ್ಟು 8ನೇ ಶತಕ ಬಾರಿಸಿದರು.ಕೊಹ್ಲಿ ಮತ್ತು ಫಾಫ್ ಐಪಿಎಲ್ ವೊಂದರ ಆವೃತ್ತಿಯೊಂದರಲ್ಲಿ ದಾಖಲೆಯ ಜೊತೆಯಾಟ ಆಡಿದ್ದು ಇದೇ ಮೊದಲಾಗಿದೆ.
ವಿರಾಟ್ ಕೊಹ್ಲಿ 63 ಎಸೆತ,12 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಫಾಫ್ ಡುಪ್ಲೆಸಿಸ್ 71 ರನ್ ಗಳಿಸಿದರು.
ಇದಕ್ಕೂ ಮುನ್ನ ಸನ್ ರೈಸರಸ್ ಪರ ಹೆನ್ರಿಕ್ ಕ್ಲಾಸೆನ್ 104, ಹ್ಯಾರಿ ಬ್ರೂಕ್ 27,ಏಡಿನ್ ಮಾರ್ಕ ರಮ್ 18 ರನ್ ಹೊಡೆದರು.
ಐಪಿಎಲ್ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟರ್ಗಳು ಶತಕ ಹೊಡೆದಿದ್ದು ಇದೇ ಮೊದಲಾಗಿದೆ.