ತರಾ ಹರ್ಡಲರ್ ಜ್ಯೋತಿ ಯೆರ್ರಾಜಿ ಇಲ್ಲಿ ನಡೆಯುತ್ತಿರುವ ಫೆಡರೇಶನ್ ಅಥ್ಲೆಟಿಕ್ಸ್‍ನಲ್ಲಿ ಎರಡನೆ ಚಿನ್ನ ಗೆದ್ದು ಮಿಂಚಿದ್ದಾರೆ.
ಮಹಿಳೆಯರ 200ಮೀ, ಓಟದಲ್ಲಿ 23.42 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಇದರೊಂದಿಗೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗೆ ನಿಗದಿ ಮಾಡಿದ್ದ 23.50 ಸೆಕೆಂಡುಗಳಲ್ಲಿ ಮಾನದಂಡವನ್ನು ಮೀರಿದರು.
ಮುಂಬರುವ ಕಾಂಟಿನೆಂಟಲ್ ಚಾಂಪಿಯನ್‍ಶಿಪ್‍ಗೆ ಎಎಫ್ಐನ ಆಯ್ಕೆ ಸಮಿತಿ ಅಥ್ಲೀಟ್‍ಗಳನ್ನು ಆಯ್ಕೆ ಮಾಡಲಿದೆ. ತಮಿಳುನಾಡಿದ ಅರ್ಚನಾ 23.61 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪಡೆದರು.
ಪುರುಷರ 200 ಮೀ. ಓಟದಲ್ಲಿ ಅಸ್ಸಾಂನ ಅಮ್ಲಾನ್ ಬೊರ್ಗಹೈನ್ 20.83 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
ಜಾವೆಲಿನ್ ಅಥ್ಲೀಟ್ ರೋಹಿತ್ ಯಾದವ್ 83.40 ಮೀ. ದೂರ ಎಸೆದು ಚಿನ್ನ ಗೆದ್ದು ಗಮನ ಸೆಳೆದರು. ಮನು ಡಿ.ಪಿ 82.95 ಮೀ. ದೂರ ಎಸೆದು ಬೆಳ್ಳಿ ಗೆದ್ದರು.
ಮಹಿಳೆಯರ 800 ಮೀ.ಓಟದಲ್ಲಿ ಐದು ಅಥ್ಲೀಟ್‍ಗಳು ಏಷ್ಯನ್ ಚಾಂಪಿಯನ್‍ಶಿಪ್‍ಗೆ ನಿಗದಿ ಮಾಡಿದ್ದ ಮಾನದಂಡ (2:05.74ಸೆ) ಮೀರಿದ್ದಾರೆ.
ಕೂಟ ದಾಖಲೆ ನಿರ್ಮಿಸಿದ ಜ್ಯೋತಿ ಯೆರ್ರಾಜಿ
ವಿಶಾಖಪಟ್ಟಣದ ಜ್ಯೋತಿ ಯೆರ್ರಾಜಿ ಫೆಡರೇಷನ್ ಕಪ್‍ನ 100 ಮೀ. ಹರ್ಡಲ್ಸ್ ವಿಭಾಗದಲ್ಲಿ ಕೂಟ ದಾಖಲೆ ನಿರ್ಮಿಸಿದ್ದಾರೆ.
ಹೀಟ್ಸ್ ವಿಭಾಗದಲ್ಲಿ ಜ್ಯೋತಿ ಯೆರ್ರಾಜಿ 12.89 ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನ ಪಡೆದರು.ಇದರೊಂದಿಗೆ ಏಷ್ಯನ್ ಚಾಂಪಿಯನ್‍ಶಿಪ್‍ಗೆ `ಭಾರತ ಅಥ್ಲೆಟಿಕ್ಸ್ ಫೆಡರೇಶನ್ ನಿಗದಿಪಡಿಸಿರುವ 13.63ಸೆ.ಗಳ ಅರ್ಹತಾ ಮಾನದಂಡವನ್ನು ಮೀರಿದರು. ತಮ್ಮದೇ ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಸುಧಾರಿಸಿದರು. ಏಷ್ಯನ್ ಕೂಟ ಜುಲೈ 12ರಿಂದ 16ರವರೆಗೆ ಬ್ಯಾಂಕಾಕ್‍ನಲ್ಲಿ ನಡೆಯಲಿದೆ.