ರಾಜಸ್ಥಾನ ರಾಯಲ್ಸ್ಗೆ ಹ್ಯಾಟ್ರಿಕ್ ಗೆಲುವಿನ ಕನಸು. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅಂಕಪಟ್ಟಿಯಲ್ಲಿ ಮುನ್ನಡೆಯುವ ಹಂಬಲ. ಮ್ಯಾಕ್ಸ್ವೆಲ್ ಮತ್ತು ಹ್ಯಾಝಲ್ವುಡ್ ಆಗಮನದಿಂದ ಆರ್ಸಿಬಿ ವಿಶ್ವಾಸ ಹೆಚ್ಚಿಸಿದೆ. ಮತ್ತೊಂದು ಕಡೆಯಲ್ಲಿ ಸತತ ಸ್ಥಿರ ಪ್ರದರ್ಶನ ರಾಜಸ್ಥಾನ ರಾಯಲ್ಸ್ ಬಲವನ್ನು ಹೆಚ್ಚಿಸಿದೆ.
ರಾಯಲ್ ಚಾಲೆಂಜರ್ಸ್ಗೆ ಮ್ಯಾಕ್ಸ್ವೆಲ್, ಹ್ಯಾಜಲ್ವುಡ್ ಬಲ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟಿ20 ಕ್ರಿಕೆಟ್ನ ರಣಬೇಟೆಗಾರರ ಎಂಟ್ರಿಯಾಗಲಿದೆ. ಹೀಗಾಗಿ ಫಾರಿನ್ ಕೋಟಾದಲ್ಲಿ ಬದಲಾವಣೆ ಗ್ಯಾರೆಂಟಿ. ಶಫೇನ್ ರುದರ್ ಫೋರ್ಡ್ ಜಾಗದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಆಡಿದರೆ, ಜೋಶ್ ಹ್ಯಾಜಲ್ ವುಡ್ ಡೇವಿಡ್ ವಿಲ್ಲಿಯ ಜಾಗದಲ್ಲಿ ಆಡಲಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವನಿಂದು ಹಸರಂಗ ಇನ್ನೆರಡು ಫಾರಿನ್ ಕೋಟಾದ ಅಟಗಾರು.
ಫಾಫ್ ಡು ಪ್ಲೆಸಿಸ್ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಅನೂಜ್ ರಾವತ್ ಸ್ಥಿರತೆ ಬಗ್ಗೆ ಪ್ರಶ್ನೆ ಇದೆ. ವಿರಾಟ್ ಕೊಹ್ಲಿಯ ಜೊತೆಗೆ ಗ್ಲೆನ್ ಮ್ಯಾಕ್ಸ್ವೆಲ್ ಟಾಪ್ ಆರ್ಡರ್ಗೆ ಸ್ಥಿರತೆ ಕೊಡಲಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಶಹಬಾಝ್ ನದೀಮ್ ಫಿನಿಷರ್ ಕೆಲಸವನ್ನು ಮಾಡಬೇಕಿದೆ. ವನಿಂದು ಹಸರಂಗ ಲೆಗ್ ಸ್ಪಿನ್ ಸ್ಪೆಷಲಿಸ್ಟ್. ಇವರಿಗೆ ಈ ಬಾರಿ ಮ್ಯಾಕ್ಸ್ವೆಲ್ ಆಫ್ ಸ್ಪಿನ್ ಬಲವೂ ಸಿಗಲಿದೆ. ಮೊಹಮ್ಮದ್ ಸಿರಾಜ್ ಜೊತೆ ಹ್ಯಾಝಲ್ ವುಡ್ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. ಹರ್ಷಲ್ ಪಟೇಲ್ ಮತ್ತು ಆಕಾಶ್ ದೀಪ್ ಇನ್ನಿಬ್ಬರು ಬೌಲರ್ಗಳು.
ರಾಜಸ್ಥಾನದ ಗೆಲುವಿನ ಲೆಕ್ಕ:
ರಾಜಸ್ಥಾನ ರಾಯಲ್ಸ್ ಟೂರ್ನಿಯಲ್ಲಿ ಬ್ಯಾಲೆನ್ಸ್ ಆಗಿರುವ ತಂಡದಂತೆ ಕಾಣುತ್ತಿದೆ. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಲ ಎದುರಾಳಿ ಬೌಲರ್ಗಳ ಎದುರಾಳಿಗಳ ಎದೆ ಬಡಿತ ಹೆಚ್ಚಿಸಿದೆ. ಇದಕ್ಕೆ ಶಿಮ್ರನ್ ಹೆಟ್ಮಾಯರ್ ಬ್ಯಾಟಿಂಗ್ನ ಫಿನಿಷಿಂಗ್ ಟಚ್ ಸಿಕ್ಕಿದೆ. ರಿಯಾನ್ ಪರಾಗ್ ಆಲ್ರೌಂಡರ್ ಕೋಟಾ ಭರ್ತಿ ಮಾಡಿದ್ದಾರೆ. ಅಶ್ವಿನ್ ಮತ್ತು ಯಜ್ವೆಂದರ್ ಚಹಲ್ ಜುಗಲ್ ಬಂಧಿ ಎದುರಾಳಿಗಳಿಗೆ ಬಿಡಿಸಲಾಗದ ಕಗ್ಗಂಟು. ಟ್ರೆಂಟ್ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ವೇಗ ಮತ್ತು ಸ್ವಿಂಗ್ ಎದುರಾಳಿಗೆ ಆರಂಭದಲ್ಲೇ ಚಾಲೆಂಜ್. ಡೆರೆಲ್ ಮಿಚೆಲ್ ಅಥವಾ ಜೇಮ್ಸ್ ನಿಶಾಮ್ ನವ್ದೀಪ್ ಸೈನಿ ಜಾಗ ಭರ್ತಿ ಮಾಡುವ ಜೊತೆಗೆ ಆಲ್ರೌಂಡರ್ ಕೋಟಾಕ್ಕೆ ಬಲ ತುಂಬಲಿದ್ದಾರೆ.
ಪಿಚ್& ಕಂಡೀಷನ್
ವಾಂಖೆಡೆ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳು ರನ್ಗಳಿಸುವಲ್ಲಿ ಕೊಂಚ ಎಡವಿದ್ದಾರೆ. ಆರಂಭದಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುವುದರಿಂದ ಬ್ಯಾಟ್ಸ್ಮನ್ಗಳಿಗೆ ಚಾಲೆಂಜ್ ಖಚಿತ.