ಗೆಳೆಯನ ಬರ್ತಡೇ ಪಾರ್ಟಿ ವೇಳೆ ಓಡುವಾಗ ಜಾರಿ ಆಸ್ಟ್ರೇಲಿಯಾ ತಂಡದ ಹೊಡಿ ಬಡಿ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಕಾಲು ಮುರಿದಿದೆ.ಕನಿಷ್ಠ ಮೂರು ತಿಂಗಳು ವಿಶ್ರಾಂತಿಯಲ್ಲಿರಲಿದ್ದಾರೆ.
ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ನಡೆಯಬೇಕಿರುವ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಮ್ಯಾಕ್ಸ್ ವೆಲ್ ಗಾಯ ಸಂಬಂಧ ಪುನರ್ವಸತಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಶನಿವಾರ ಮೆಲ್ಬೋರ್ನ್ನಲ್ಲಿ ಗೆಳೆಯನ 50ನೇ ಹುಟ್ಟು ಹಬ್ಬದ ಸಂಭ್ರಮದ ಪಾರ್ಟಿ ವೇಳೆ ಓಡುವಾಗ ಮ್ಯಾಕ್ಸ್ ವೆಲ್ ಜಾರಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು.
ಮ್ಯಾಕ್ಸ್ ವೆಲ್ಗೆ ಭಾನುವಾರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ವಿಶ್ರಾಂತಿಗೆ ಒಳಪಟ್ಟಿದ್ದಾರೆ.
ಗ್ಲೇನ್ ಒಳ್ಳೆಯ ಲಯದಲ್ಲಿದ್ದರು. ದುರಾದೃಷ್ಟವಶತ್ ಗಾಯಗೊಂಡಿದ್ದಾರೆ. ಗ್ಲೇನ್ ಕಳೆದ ಕೆಲವು ಪಂದ್ಯಗಳಿಂದ ಒಳ್ಳೆಯ ಪ್ರದರ್ಶನ ನೀಡಿದ್ದರು ಎಂದು ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.
ಬಿಳಿ ಚೆಂಡಿನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಅದ್ಭುತ ಆಟಗಾರ, ಅವರು ಗುಣಮುಖರಾಗಲು ಮತ್ತು ಪುನರ್ವಸತಿಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತೇವೆ ಎಂದು ಆಯ್ಕೆ ಸಮಿತಿ ಹೇಳಿದೆ.