ಪಂದ್ಯದ ಗತಿ ಬದಲಿಸಿದ Ravindra Jadeja ಹಿಡಿದ ಕ್ಯಾಚ್
ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಎಂತಹ ಫೀಲ್ಡರ್ ಎಂದು ಪದೇ ಪದೇ ಸಾಬೀತು ಮಾಡಿದ್ದಾರೆ. ಇವರು ಫೀಲ್ಡಿಂಗ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿಗೆ ಜಡ್ಡು ಕ್ಷೇತ್ರರಕ್ಷಣೆ ಮಾಡುವಾಗ ಮಂಕಾಗಿದ್ದಂತೆ ಕಂಡು ಬಂದಿತ್ತು. ಭಾನುವಾರ ನಡೆದ ಪಂದ್ಯದಲ್ಲಿ ಜಡ್ಡು ಹಿಡಿದ ಕ್ಯಾಚ್ ಎಲ್ಲರ ಚಿತ್ತ ಕದ್ದಿದೆ.
ಜಡೇಜಾ ಬಟ್ಲರ್ ಅವರ ಅದ್ಭುತ ಕ್ಯಾಚ್ ಪಡೆದರು. ಹಾರ್ದಿಕ್ ಅವರ ಶಾರ್ಟ್ ಪಿಚ್ ಬಾಲ್ ನಲ್ಲಿ ಬಟ್ಲರ್ ಹುಕ್ ಶಾಟ್ ಆಡಿದರು. ನಂತರ ಲೆಗ್ ಸೈಡ್ ಬೌಂಡರಿಯಲ್ಲಿ ನಿಂತಿದ್ದ ಜಡೇಜಾ ಓಡುತ್ತಾ ಬಂದು ಅದ್ಭುತ ಕ್ಯಾಚ್ ಪಡೆದರು. ಜಡೇಜಾ ಅವರ ಈ ಕ್ಯಾಚ್ ಪಂದ್ಯದ ದಿಕ್ಕನೇ ತಿರುಗಿಸಿತು. ಜಡೇಜಾ ಹಿಡಿದ ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Superman Ravindra Jadeja. pic.twitter.com/Xz0JZZgbfV
— Mufaddal Vohra (@mufaddal_vohra) July 17, 2022
ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಪವರ್‌ಪ್ಲೇಯಲ್ಲಿ ಮೂರು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿ ಕಳಪೆ ಆರಂಭ ಪಡೆದಿತ್ತು. ಇದಕ್ಕೂ ಮುನ್ನ ಪಂದ್ಯದ ಎರಡನೇ ಓವರ್‌ನಲ್ಲಿ ಸಿರಾಜ್ ಖಾತೆ ತೆರೆಯದೆ ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದಾದ ಬಳಿಕ ಅಪಾಯಕಾರಿಯಾಗಿ ಕಾಣಿಸಿಕೊಂಡ ಆರಂಭಿಕ ಬ್ಯಾಟ್ಸ್ ಮನ್ ಜೇಸನ್ ರಾಯ್ (41) ಪಾಂಡ್ಯ ಅವರಿಗೆ ಪಂತ್ ಕೈಗೆ ಕ್ಯಾಚ್ ನೀಡಿದರು. ಅದೇ ಸಮಯದಲ್ಲಿ, ಪಾಂಡ್ಯ ತನ್ನ ಮುಂದಿನ ಓವರ್‌ನಲ್ಲಿ ಬೆನ್ ಸ್ಟೋಕ್ಸ್ (27) ಅವರಿಗೆ ಖೆಡ್ಡಾ ತೋಡಿದರು. ಇದರಿಂದಾಗಿ ಇಂಗ್ಲೆಂಡ್ 13.2 ಓವರ್‌ಗಳಲ್ಲಿ 74 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.

ನಾಯಕ ಜೋಸ್ ಬಟ್ಲರ್ ಮತ್ತು ಮೊಯಿನ್ ಅಲಿ ಇನ್ನಿಂಗ್ಸ್ ಅನ್ನು ನಿಭಾಯಿಸಲು ಪ್ರಯತ್ನಿಸಿದರು. ಇದೇ ವೇಳೆ ಇವರಿಬ್ಬರು ತಾಳ್ಮೆಯಿಂದ ಭಾರತದ ಬೌಲರ್‌ಗಳನ್ನು ಎದುರಿಸಿದರು. ನಾಯಕ ಬಟ್ಲರ್ 21.3 ಓವರ್‌ಗಳಲ್ಲಿ ಚಹಾಲ್ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡದ ಸ್ಕೋರ್ 100 ಗಡಿ ದಾಟಿದರು, ಆದರೆ 27.1 ಓವರ್‌ಗಳಲ್ಲಿ, ಮೊಯಿನ್ (34) ಜಡೇಜಾ ಎಸೆತದಲ್ಲಿ ಔಟ ದರು. ಅಲಿ ನಾಯಕ ಬಟ್ಲರ್ ಅವರೊಂದಿಗೆ 84 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿದರು.
ಬಟ್ಲರ್ ಜೊತೆಗೆ ಆರನೇ ಕ್ರಮಾಂಕದಲ್ಲಿ ಬಂದ ಲಿಯಾಮ್ ಲಿವಿಂಗ್ ಸ್ಟೋನ್ ಇನ್ನಿಂಗ್ಸ್ ಅನ್ನು ಮುಂದಕ್ಕೆ ಸಾಗಿಸಿದರು. ಇದೇ ವೇಳೆ ಬಟ್ಲರ್ 65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಬ್ಬರೂ ತಂಡಕ್ಕೆ ವೇಗವಾಗಿ ರನ್ ಗಳಿಸಿದರು, ಆದರೆ 37 ನೇ ಓವರ್‌ನಲ್ಲಿ ಪಾಂಡ್ಯ ಲಿವಿಂಗ್‌ಸ್ಟೋನ್ (27) ಮತ್ತು ನಾಯಕ ಬಟ್ಲರ್ (60) ಅವರ ವಿಕೆಟ್ ಪಡೆದು ತಂಡಕ್ಕೆ ಪೆಟ್ಟು ನೀಡಿದರು.
Ravindra Jadeja, Buttler, catch, England vs India, ODI, Cricket,