ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಹೋರಾಟದ ಎರಡನೇ ದಿನ ಮುಂಬೈ ಮತ್ತು ಮಧ್ಯಪ್ರದೇಶ ಮೇಲುಗೈ ಸಾಧಿಸಿದೆ. ಮುಂಬೈ ಉತ್ತರ ಪ್ರದೇಶ ವಿರುದ್ಧ ಹಿಡಿತ ಸಾಧಿಸಿದ್ದರೆ, ಪಶ್ಚಿಮ ಬಂಗಾಳದ ಬ್ಯಾಟಿಂಗ್ ವೈಫಲ್ಯ ಮಧ್ಯ ಪ್ರದೇಶಕ್ಕೆ ವರವಾಗಿದೆ.
2ನೇ ದಿನ ಮುಂಬೈ ತಂಡಕ್ಕೆ ಹಾರ್ದಿಕ್ ತೋಮರೆ ಸಿಡಿಸಿದ 115 ರನ್ ಮತ್ತು ಶಂಸ್ ಮುಲಾನಿಯ 50 ರನ್ಗ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 393 ರನ್ಗಳಿಸಿತು. ಯುಪಿ ಪರ ಕರಣ್ ಶರ್ಮಾ 4 ವಿಕೆಟ್ ಪಡೆದರು. ಮೊದಲ ದಿನ ಯಶಸ್ವಿ ಜೈಸ್ವಾಲ್ 100 ರನ್ಗಳಿಸಿ ಮುಂಬೈಗೆ ನೆರವಾಗಿದ್ದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಯುಪಿ 25 ರನ್ಗೆ 2 ವಿಕೆಟ್ ಕಳೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್:
ಮುಂಬೈ ಮೊದಲ ಇನ್ನಿಂಗ್ಸ್: 393
ಯಶಸ್ವಿ ಜೈಸ್ವಾಲ್ 100
ಹಾರ್ದಿಕ್ ತೊಮರೆ 115
ಕರಣ್ ಶರ್ಮಾ 46ಕ್ಕೆ 4 ವಿಕೆಟ್
ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 25/2
ಮಾಧವ್ ಕೌಶಿಕ್ ಅಜೇಯ 12
ಕರಣ್ ಶರ್ಮಾ ಅಜೇಯ 10
ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ ತಲಾ 1 ವಿಕೆಟ್
ಇನ್ನೊಂದು ಸೆಮಿಫೈನಲ್ನಲ್ಲಿ ಹಿಮಾಂಶು ಮಂತ್ರಿ ಸಿಡಿಸಿದ 165 ರನ್‌ಗಳ ನೆರವಿನಿಂದ ಮಧ್ಯ ಪ್ರದೇಶ 341 ರನ್ಗಳಿಸಿತು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ಬಂಗಾಳ ಬ್ಯಾಟ್ಸ್ಮನ್ಗಳು ಪವೆಲಿಯನ್ ಪರೇಡ್ ನಡೆಸಿದರು. ಮನೋಜ್ ತಿವಾರಿ ಅಜೇಯ 84 ಹಾಗೂ ಶಹಬಾಸ್ ಅಹ್ಮದ್ ಅಜೇಯ 72 ರನ್ಗಳಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಮಧ್ಯ ಪ್ರದೇಶ ಮೊದಲ ಇನ್ನಿಂಗ್ಸ್: 341
ಹಿಮಾಂಶು ಮಂತ್ರಿ 165,
ಆಕಾಶ್ತ್ ರಘೂವಂಶಿ 63
ಮುಕೇಶ್ ಕುಮಾರ್ 66ಕ್ಕೆ 4 ವಿಕೆಟ್
ಪಶ್ಚಿಮ ಬಂಗಾಳ ಮೊದಲ ಇನ್ನಿಂಗ್ಸ್: 197/5
ಮನೋಜ್ ತಿವಾರಿ ಅಜೇಯ 84
ಶಹಬಾಸ್ ಅಹ್ಮದ್ ಅಜೇಯ 72
ಪುನೀತ್ ಡಾಟೆ ಮತ್ತು ಕುಮಾರ್ ಕಾರ್ತಿಕೇಯ ತಲಾ 2 ವಿಕೆಟ್