ಸ್ಪೋಟಕ ಬ್ಯಾಟಿಂಗ್, ಸ್ಥಿರ ಪ್ರರ್ದಶನದಿಂದ ಗಮನ ಸೆಳೆದಿದ್ದ ರಾಹುಲ್ ತ್ರಿಪಾಠಿಗೆ ಕಡೆಗೂ ಟೀಂ ಇಂಡಿಯಾ ಬಾಗಿಲು ತೆರೆದಿದ್ದು, ಮುಂಬರುವ ಐರ್ಲೆಂಡ್ ಪ್ರವಾಸಕ್ಕೆ ರಾಹುಲ್ ತ್ರಿಪಾಠಿ ಆಯ್ಕೆಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಹಲವು ವರ್ಷದಿಂದ ಆಡುತ್ತಿರುವ ರಾಹುಲ್ ತ್ರಿಪಾಠಿ, ಸ್ಥಿರ ಪ್ರದರ್ಶನದಿಂದ ಮಿಂಚುತ್ತಿದ್ದಾರೆ. ಆದರು ತ್ರಿಪಾಠಿ ಪಾಲಿಗೆ ಟೀಂ ಇಂಡಿಯಾದಲ್ಲಿ ಆಡುವ ಅದೃಷ್ಟ ಕೂಡಿ ಬಂದಿರಲಿಲ್ಲ. 2022ರ ಐಪಿಎಲ್ನಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ರಾಹುಲ್ ತ್ರಿಪಾಠಿ, ಅದ್ಭುತ ಪ್ರದರ್ಶನ ನೀಡುವ ಮೂಲಕ ಸನ್ರೈಸರ್ಸ್ ಹೈದ್ರಾಬಾದ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಕಾಣಿಸಿಕೊಂಡಿದ್ದರು.
ರಾಹುಲ್ ತ್ರಿಪಾಠಿ ಅವರ ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಇವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕೆಂಬ ಮಾತುಗಳನ್ನು ಆಡಿದ್ದರು. ಪರಿಣಾಮ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್ ತ್ರಿಪಾಠಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ದೊರೆಯುವ ನಿರೀಕ್ಷೆ ಇತ್ತಾದರು ಇದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಆಯ್ಕೆದಾರರ ಗಮನ ಸೆಳೆದಿರುವ ರಾಹುಲ್ ತ್ರಿಪಾಠಿ, ಜೂ.26ರಿಂದ ನಡೆಯುವ ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ರಾಹುಲ್ ತ್ರಿಪಾಠಿ, ಟೀಂ ಇಂಡಿಯಾ ಜರ್ಸಿಧರಿಸುವ ನಿರೀಕ್ಷೆ ಎದುರಾಗಿದೆ.
IPL 2022ರಲ್ಲಿ ರಾಹುಲ್ ತ್ರಿಪಾಠಿ ಪ್ರದರ್ಶನ:
ಪಂದ್ಯಗಳು : 14
ರನ್ಗಳು : 413
ಸರಾಸರಿ : 37.55
ಸ್ಟ್ರೈಕ್ ರೇಟ್ : 158.23
50/100 : 3/0