3ನೇ ದಿನ ಆಟ ಆರಂಭಿಸಿದ ಉತ್ತರ ಪ್ರದೇಶ ಮುಂಬೈ ಬೌಲರ್ಗಳ ಸಾಂಘೀಕ ಆಟಕ್ಕೆ ತಲೆ ಬಾಗಿತು. ಶಿವಂ ಮಾವಿ ಸಿಡಿಸಿದ 48 ರನ್ಗಳ ಹೋರಾಟ ಬಿಟ್ಟರೆ ಉಳಿದವರಿಂದ ಹೆಚ್ಚಿನಕೊಡುಗೆ ಬರಲಿಲ್ಲ. ಹೀಗಾಗಿ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳಿಗೆ ಆಲೌಟ್ ಆಯಿತು. ಮುಂಬೈ ಪರ ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ ಮತ್ತು ಮೋಹಿತ್ ಅವಸ್ಥಿ ತಲಾ 3 ವಿಕೆಟ್ ಪಡೆದರು.
213 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ನಾಯಕ ಪೃಥ್ವಿ ಷಾ ಅಬ್ಬರದ ಆರಂಭ ತಂದುಕೊಟ್ಟರು. ಪೃಥ್ವಿ 71 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 64 ರನ್ಸಿಡಿಸಿ ಔಟಾದರು. ಅಷ್ಟೇ ಅಲ್ಲ ಯಶಸ್ವಿ ಜೈಸ್ವಾಲ್ ಜೊತೆಗೆ ಮೊದಲ ವಿಕೆಟ್ಗೆ 66 ರನ್ಗಲ ಜೊತೆಯಾಟವನ್ನು ಕೂಡ ತಂದುಕೊಟ್ಟರು.
ಜೈಸ್ವಾಲ್ ಮತ್ತು ಆರ್ಮನ್ ಜಾಫರ್ ನಡುವೆಯೂ ಉತ್ತಮ ಜೊತೆಯಾಟ ಬಂತು. ಪಂದ್ಯದ ಮೇಲೆ ಮುಂಬೈ ಹಿಡಿತ ಗಟ್ಟಿಯಾಯಿತು. ದಿನದ ಅಂತ್ಯಕ್ಕೆ ಮುಂಬೈ 2ನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 133 ರನ್ಗಳಿಸಿದೆ. ಜೈಸ್ವಾಲ್ 35 ಹಾಗೂ ಅರ್ಮಾನ್ ಜಾಫರ್ 32 ರನ್ಗಳಿಸಿ 4ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಮುಂಬೈ ಒಟ್ಟಾರೆ 346ರನ್ಗಳ ಮುನ್ನಡೆ ಹೊಂದಿದೆ.