ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಬಳಿಕ ಸ್ಪೇನ್ ಗೂಳಿ ರಾಫೆಲ್ ನಡಾಲ್ ಏನ್ ಮಾಡ್ತಿದ್ದಾರೆ ಅನ್ನುವ ಕುತೂಹಲವಂತೂ ಇದ್ದೇ ಇದೆ. ವಿಂಬಲ್ಡನ್ ಗೆಲ್ಲುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ರಾಫಾ ಮೊದಲ ಬಾರಿಗೆ ತಂದೆಯಾಗುವ ಖುಷಿಯಲ್ಲಿದ್ದಾರೆ.
ಸ್ಪಾನೀಷ್ ಮ್ಯಾಗಜೀನ್ ‘ಹೊಲಾ’ ವರದಿಯ ಪ್ರಕಾರ, ರಾಫೆಲ್ ನಡಾಲ್ ಹಾಗೂ ಪತ್ನಿ ಮರಿಯಾ ಫ್ರಾನ್ಸಿಕಾ ಪೆರೆಲ್ಲೊ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಮರಿಯಾ ಫ್ರಾನ್ಸಿಕಾ ಪೆರೆಲ್ಲೊ ಪ್ರೆಗ್ನೆಂಟ್ ಅನ್ನುವ ಸುದ್ದಿ ಹರಡಿತ್ತು. ಆದರೆ ಈ ಕುರಿತು ನಡಾಲ್ ದಂಪತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಡಾಲ್ ಹಾಗೂ ಮರಿಯಾ ನಡುವಿನ ಬಾಂಧವ್ಯ ತುಂಬಾ ಹಳೆಯದ್ದು. ಹದಿಹರೆಯದ ವಯಸ್ಸಿನಿಂದಲೇ ಜೊತೆಯಾಗಿ ಇದ್ದವರು. ಮೂರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. 36 ವರ್ಷ ವಯಸ್ಸಿಗೆ ನಡಾಲ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಫ್ರೆಂಚ್ ಓಪನ್ ಬಳಿಕ ನಡಾಲ್ ವಿರಾಮದಲ್ಲಿದ್ದಾರೆ. ಕುಟುಂಬ ಹಾಗೂ ಸ್ನೇಹಿತರೊಟ್ಟಿಗೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.