ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇವಲ 4 ತಂಡಗಳು ಮಾತ್ರ ಉಳಿದುಕೊಂಡಿವೆ. ಮುಂಬೈ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳ ತಂಡಗಳು ಫೈನಲ್ ಸ್ಥಾನಕ್ಕಾಗಿಸೆಮಿಫೈನಲ್ನಲ್ಲಿ ಹೋರಾಟ ಮಾಡಲಿವೆ. ಬೆಂಗಳೂರಿನಲ್ಲೇ ಜೂನ್ 14 ರಿಂದ ಜೂನ್ 18ರ ತನಕ ರಣಜಿ ಸೆಮಿಫೈನಲ್ ನಡೆಯಲಿದೆ.
1st ಸೆಮಿಫೈನಲ್
ಮುಂಬೈ VS ಉತ್ತರ ಪ್ರದೇಶ
ಜೂನ್ 14 ರಿಂದ 18
ಜಸ್ಟ್ ಕ್ರಿಕೆಟ್ ಗ್ರೌಂಡ್, ಬೆಂಗಳೂರು
ಮೊದಲ ಸೆಮಿಫೈನಲ್ ಪಂದ್ಯ ಮುಂಬೈ ಮತ್ತು ಉತ್ತರ ಪ್ರದೇಶ ನಡುವೆ ನಡೆಯಲಿದೆ. ಜಸ್ಟ್ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯ ನಡೆಯಲಿದೆ.
2nd ಸೆಮಿಫೈನಲ್
ಪಶ್ಚಿಮ ಬಂಗಾಳ VS ಮಧ್ಯಪ್ರದೇಶ
ಜೂನ್ 14 ರಿಂದ 18
ಆಲೂರು, ಬೆಂಗಳೂರು
ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶ ನಡುವೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಆಲೂರು ಮೈದಾನದಲ್ಲಿ ನಡೆಯಲಿದೆ.
ಈ ಎರಡು ಪಂದ್ಯಗಳ ವಿಜೇತರು ಫೈನಲ್ ಪಂದ್ಯದಲ್ಲಿ ರಣಜಿ ಚಾಂಪಿಯ್ ಪಟ್ಟಕ್ಕಾಗಿ ಹೋರಾಟ ಮಾಡಲಿದ್ದಾರೆ. ಫೈನಲ್ ಜೂನ್ 23 ರಿಂದ ಜೂನ್ 27ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.