ಕೊರೊನಾ ನಡುವೆಯೂ ಐಪಿಎಲ್ ಟೂರ್ನಿಯನ್ನು ನಡೆಸಿದ ಕೀರ್ತಿ ಬಿಸಿಸಿಐನದ್ದು. ಐಪಿಎಲ್ ಅನ್ನು ಎಂದೂ ನಿಲ್ಲಿಸದ ಬಿಸಿಸಿಐ ಈ ಬಾರಿ ತಂಡಗಳ ಸಂಖ್ಯೆಯ್ನು 10ಕ್ಕೇರಿಸಿತ್ತು. ಪಂದ್ಯಗಳ ಸಂಖ್ಯೆಯನ್ನು 74ಕ್ಕೆ ವಿಸ್ತರಿಸಿತ್ತು. ಈಗ ಇನ್ನೊಂದು ಪ್ರಸ್ತಾಪ ಬಿಸಿಸಿಐ ಮುಂದಿದೆ. ಮುಂದಿನ ಆವೃತ್ತಿಯಿಂದ ಪಂದ್ಯಗಳ ಸಂಖ್ಯೆಯನ್ನು 94ಕ್ಕೇರಿಸುವ ಪ್ಲಾನ್ ಇದೆ.
10 ತಂಡಗಳು ಟೂರ್ನಿಯಲ್ಲಿ ಇರುವುದರಿಂದ ಪ್ರತೀ ತಂಡವೂ ಹೋಮ್ ಅಂಡ್ ಅವೇ ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಪ್ರತಿಯೊಂದು ತಂಡವೂ 18 ಲೀಗ್ ಪಂದ್ಯಗಳನ್ನು ಆಡಬೇಕಿದೆ. ಇದು ಪಂದ್ಯಗಳ ಸಂಖ್ಯೆಯನ್ನು 94ಕ್ಕೇರಿಸಲಿದೆ. ಐಪಿಎಲ್ 2022ರಲ್ಲಿ ಪ್ರತೀ ತಂಡಗಳು 14 ಲೀಗ್ ಪಂದ್ಯಗಳನ್ನು ಮಾತ್ರ ಆಡಿದ್ದವು. ತಂಡಗಳನ್ನು ಎರಡು ಗುಂಪುಗಳಾಗಿ ಮಾಡಿ ಕಪ್ ಗೆದ್ದ ಆಧಾರದಲ್ಲಿ ಸೀಡಿಂಗ್ ನೀಡಲಾಗಿತ್ತು. ಹೀಗಾಗಿ ಮತ್ತೊಂದು ಗ್ರೂಪ್ ನಲ್ಲಿರುವ ಒಂದು ತಂಡವನ್ನು ಹೊರತು ಪಡಿಸಿ ಉಳಿದ ತಂಡಗಳ ಜೊತೆ ಕೇವಲ 1 ಪಂದ್ಯ ಆಡಲು ಮಾತ್ರ ಅವಕಾಶ ಸಿಕ್ಕಿತ್ತು. ಆದರೆ ಮುಂದಿನ ಬಾರಿಗೆ ಪ್ರತೀ ತಂಡವೂ ಎರಡು ಬಾರಿ ಆಡುವ ಹಾಗೇ ಮಾಡಲು ಬಿಸಿಸಿ ಪ್ಲಾನ್ ಮಾಡುತ್ತಿದೆ.
2023-27ರ ಅವಧಿಯಲ್ಲಿ ಪಂದ್ಯಗಳ ಮೌಲ್ಯವೂ ಜಾಸ್ತಿಯಾಗಲಿರುವುದರಿಂದ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. 5 ವರ್ಷಗಳ ಅವಧಿಯಲ್ಲಿ 370 ಪಂದ್ಯಗಳ ಬದಲು 410 ಪಂದ್ಯಗಳು ನಡೆಯುವ ನಿರೀಕ್ಷೆಯಿದೆ.
2023-2027ರ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಟೂರ್ನಿಯು ವಿಶ್ವದ 2ನೇ ಅತಿ ದುಬಾರಿ ಕ್ರೀಡಾ ಲೀಗ್ ಆಗುವತ್ತ ಸಾಗಿದೆ. ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರು. ದಾಟುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ.

ಒಟ್ಟಿನಲ್ಲಿ ಬಿಸಿಸಿಐ ಆಟವನ್ನು ಬಹುಶಃ ಆ ದೇವರು ಕೂಡ ಅರ್ಥ ಮಾಡಿಕೊಳ್ಳುವುದು ಕಷ್ಟ. ಯಾಕಂದರೆ ಎಲ್ಲದರಲ್ಲೂ ದುಡ್ಡು ಮತ್ತು ಲಾಭ ಹುಡುಕುವ ಬಿಸಿಸಿಐ ಯಶಸ್ಸಿಗೆ ಹಗಲು ರಾತ್ರಿ ಕಷ್ಟ ಪಡುತ್ತದೆ ಅನ್ನುವುದು ಸುಳ್ಳಲ್ಲ.