62 ದಿನ, 64 ಪಂದ್ಯ… ಎರಡು ಹಂತಗಳಲ್ಲಿ ರಣಜಿ ಟೂರ್ನಿಗೆ ಮುಹೂರ್ತ ಫಿಕ್ಸ್
Ranji Trophy schedule – ಪ್ರತಿಷ್ಠಿತ ರಣಜಿ ಟೂರ್ನಿಗೆ ಬಿಸಿಸಿಐ ಫೈನಲ್ ಟಚ್ ನೀಡಿದೆ. ಎರಡು ಹಂತಗಳಲ್ಲಿ ನಡೆಯಲಿರುವ 2022ರ ಸಾಲಿನ ರಣಜಿ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಮೊದಲ ಹಂತವಾಗಿ ಫೆಬ್ರವರಿ 10ರಿಂದ ಮಾರ್ಚ್ 15ವರೆಗೆ ನಡೆಯಲಿದೆ. ಆ ನಂತರ ಐಪಿಎಲ್ ಟೂರ್ನಿ ನಡೆಯಲಿರುವುದರಿಂದ ಎರಡನೇ ಹಂತದ ಪಂದ್ಯಗಳನ್ನು ಮೇ 30ರಿಂದ ಜೂನ್ 26ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.
Ranji Trophy schedule -First phase from Feb 10, knockouts from May 30
ಲೀಗ್ ನ ಮೊದಲ ಹಂತದಲ್ಲಿ 57 ಪಂದ್ಯಗಳು ನಡೆಯಲಿವೆ. ಎರಡನೇ ಹಂತದಲ್ಲಿ ನಾಲ್ಕು ಕ್ವಾರ್ಟರ್ ಫೈನಲ್, ಎರಡು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಒಟ್ಟು 7 ಪಂದ್ಯಗಳು ನಡೆಯಲಿವೆ. ಒಟ್ಟು 62 ದಿನ, 64 ಪಂದ್ಯಗಳು ಈ ಋತುವಿನಲ್ಲಿ ನಡೆಯಲಿವೆ.
ಅಂದ ಹಾಗೇ ಈ ಬಾರಿಯ ರಣಜಿ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸಲಿವೆ. ಪ್ಲೇಟ್ ಹಂತದಲ್ಲಿ ಆರು ತಂಡಗಳು ಸ್ಪರ್ಧೆ ಮಾಡಲಿದೆ. ಇನ್ನು ಎಲೈಟ್ ಗುಂಪಿನಲ್ಲಿ ಎಂಟು ಬಣಗಳಲ್ಲಿ ತಲಾ ನಾಲ್ಕು ತಂಡಗಳು ಕಾದಾಟ ನಡೆಸಲಿವೆ.
ಈ ಬಾರಿ ಲೀಗ್ ಪಂದ್ಯಗಳನ್ನು ಕಡಿಮೆ ಮಾಡಲಾಗಿದೆ. ಈ ಹಿಂದೆ ಪ್ರತಿ ತಂಡಗಳು ಐದು ಪಂದ್ಯಗಳನ್ನು ಆಡುತ್ತಿದ್ದವು. ಈ ಬಾರಿ ಮೂರು ಪಂದ್ಯಕ್ಕೆ ಸೀಮಿತವಾಗಲಿದೆ. ಹೀಗಾಗಿ ಆಟಗಾರರ ಸಂಭಾವಣೆಯನ್ನು ಕೂಡ ಹೆಚ್ಚು ಮಾಡಲಾಗಿದೆ. ಇದ್ರಿಂದ ಆಟಗಾರರಿಗೆ ಆರ್ಥಿಕವಾಗಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಇನ್ನು ಪ್ಲೇಟ್ ಗುಂಪಿನ ಪಂದ್ಯಗಳು ಕೊಲ್ಕತ್ತಾದಲ್ಲಿ ನಡೆಯಲಿದೆ. ಎಲೈಟ್ ಗುಂಪಿನ ಪಂದ್ಯಗಳು ಎಂಟು ಮೈದಾನದಲ್ಲಿ ನಡೆಯಲಿದೆ. ರಾಜ್ ಕೋಟ್, ಕಟಕ್, ಚೆನ್ನೈ, ಅಹಮದಾಬಾದ್, ತ್ರಿವೆಂಡ್ರಮ್, ದೆಹಲಿ, ಹರಿಯಾಣ, ಗುವಾಹಟಿಯಲ್ಲಿ ನಡೆಯಲಿದೆ.