Ranji Trophy final-2022- – ನಾಲ್ಕನೇ ಶತಕ ದಾಖಲಿಸಿದ ಸಫ್ರಾಝ್ ಖಾನ್

ಮುಂಬೈನ ಭರವಸೆಯ ಬ್ಯಾಟ್ಸ್ ಮೆನ್ ಶಫ್ರಾಝ್ ಖಾನ್ ಅವರು ಶತಕದ ಸಂಭ್ರಮದಲ್ಲಿ ತೇಲಾಡಿದ್ರು.
ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಶಫ್ರಾಝ್ ಖಾನ್ ಅವರು ಮಧ್ಯ ಪ್ರದೇಶ ವಿರುದ್ಧ ರನ್ ಮಳೆಯನ್ನೇ ಸುರಿಸಿದ್ರು.
ಉತ್ತಮ ಆರಂಭ ಪಡೆದ ಮುಂಬೈ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ನಿರೀಕ್ಷಿತ ಮಟ್ಟದಲ್ಲಿ ಸಾಥ್ ನೀಡಲಿಲ್ಲ. ಒಂದು ಕಡೆ ವಿಕೆಟ್ ಬೀಳುತ್ತಿದ್ರೂ ಶಫ್ರಾಝ್ ಖಾನ್ ಅವರು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡದ ಮೊತ್ತವನ್ನು 350ರ ಗಡಿಯನ್ನು ಕೂಡ ದಾಟಿಸಿದ್ರು. Ranji Trophy final-2022- – Mumbai star Sarfaraz Khan in tears after completing his century
ಪಂದ್ಯದ ಎರಡನೇ ದಿನವಾದ ಇಂದು ಸಫ್ರಾಝ್ ಖಾನ್ 40 ರನ್ ಗಳೊಂದಿಗೆ ಆಟ ಮುಂದುವರಿಸಿದ್ರು. 152 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ದಾಖಲಿಸಿದ್ದ ಶಫ್ರಾಝ್ ಖಾನ್ ನಂತರ ಮಧ್ಯ ಪ್ರದೇಶ ಬೌಲರ್ ಗಳಿಗೆ ಸಿಂಹಸ್ವಪ್ನವಾದ್ರು.
ಕೇವಲ 38 ಎಸೆತಗಳಲ್ಲಿ 50 ರನ್ ಪೇರಿಸುವ ಮೂಲಕ ಒಟ್ಟು 190 ಎಸೆತಗಳಲ್ಲಿ ನೂರು ರನ್ ದಾಖಲಿಸಿದ್ರು. ಈ ಮೂಲಕ ಈ ಋತುವಿನಲ್ಲಿ ನಾಲ್ಕನೇ ಶತಕ ಸಿಡಿಸಿದ್ದ ಗೌರವಕ್ಕೂ ಪಾತ್ರರಾಗಿದ್ದಾರೆ.
https://twitter.com/i/status/1539851801821777920
ಸಫ್ರಾಝ್ ಖಾನ್ ಅವರು ಕೊನೆಯವರಾಗಿ ಪೆವಿಲಿಯನ್ ಗೆ ಹಿಂತಿರುಗುವಾಗ 243 ಎಸೆತಗಳಲ್ಲಿ ಆಕರ್ಷಕ 134 ರನ್ ಸಿಡಿಸಿದ್ರು. ಇದರಲ್ಲಿ 13 ಬೌಂಡರಿ ಮತ್ತು ಎರಡು ಸಿಕ್ಸರ್ ಗಳಿದ್ದವು.
ಅಂದ ಹಾಗೇ ಸಫ್ರಾಝ್ ಖಾನ್ ಅವರು ಈ ಹಿಂದೆ ಉತ್ತರ ಪ್ರದೇಶ ವಿರುದ್ಧ ಆಡುತ್ತಿದ್ದರು. ನಂತರ ಮುಂಬೈ ಪರ ಆಡುತ್ತಿರುವ ಖಾನ್ ಅವರು, ತನ್ನ ಮೊದಲ ರಣಜಿ ಫೈನಲ್ ಪಂದ್ಯವನ್ನು ಆಡುತ್ತಿದ್ದಾರೆ. ಅಲ್ಲದೆ ಈ ಋತುವಿನಲ್ಲಿ 900ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ.
ಇನ್ನೊಂದೆಡೆ ಸಫ್ರಾಝ್ ಖಾನ್ ಅವರ ಬ್ಯಾಟಿಂಗ್ ವೈಖರಿಗೆ ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿವೆ. ಅಲ್ಲದೇ ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಆಡುವ ವಿಶ್ವಾಸವನ್ನು ಕೂಡ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಇದಕ್ಕು ಮೊದಲು ಮುಂಬೈ ತಂಡದ ಪರ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಪೃಥ್ವಿ ಶಾ ಅವರು ಆಕರ್ಷಕ ಅರ್ಧಶತಕ ದಾಖಲಿಸಿದ್ದರು. ಅಂತಿಮವಾಗಿ ಮುಂಬೈ ತಂಡ ಮೊದಲ ಇನಿಂಗ್ಸ್ ನಲ್ಲಿ 374 ರನ್ ಗಳಿಸಿದೆ.