ರಣಜಿ ಟ್ರೋಫಿಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐ
ಅಂತು ಇಂತು ಪ್ರತಿಷ್ಠಿತ ದೇಸಿ ಕ್ರಿಕೆಟ್ ಟೂರ್ನಿಯಾಗಿರುವ ರಣಜಿ ಟ್ರೋಫಿ ಟೂರ್ನಿಗೆ ಬಿಸಿಸಿಐ ಮುಹೂರ್ತ ಫಿಕ್ಸ್ ಮಾಡಿದೆ.
ಎರಡು ವರ್ಷಗಳ ನಂತರ ಬಿಸಿಸಿಐ ರಣಜಿ ಟ್ರೋಫಿಯನ್ನು ಆಯೋಜನೆ ಮಾಡುತ್ತಿದೆ.
2020ರ ಮಾರ್ಚ್ ನಲ್ಲಿ ಫೈನಲ್ ಪಮದ್ಯ ನಡೆದಿತ್ತು. ಕಳೆದ ವರ್ಷ ಕೋವಿಡ್ ಸೋಂಕಿನಿಂದಾಗಿ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. 2022ರ ರಣಜಿ ಋತುವಿಗೆ ಜನವರಿ 13ರಿಂದ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದ್ರೆ ಕೋವಿಡ್ ಮೂರನೇ ಅಲೆಯಿಂದಾಗಿ ಟೂರ್ನಿಯನ್ನು ಮುಂದೂಡಲಾಗಿತ್ತು.
ಇದೀಗ ರಣಜಿ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಫೆಬ್ರವರಿ 16ರಿಂದ ಮಾರ್ಚ್ 5ರವರೆಗೆ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸಲಿವೆ. ಅಹಮದಾಬಾದ್, ಕೊಲ್ಕತ್ತಾ, ತಿವೆಂಡ್ರಮ್, ಕಟಕ್, ಚೆನ್ನೈ, ಗುವಾಹಟಿ, ಹೈದ್ರಾಬಾದ್, ಬರೋಡಾ ಮತ್ತು ರಾಜ್‍ಕೋಟ್ ಸೇರಿ ಒಟ್ಟು 9 ಅಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.
ಎಂಟು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳು ಕಾದಾಟ ನಡೆಸಲಿವೆ. ಪ್ಲೇ ಗ್ರೂಪ್ ನಲ್ಲಿ ಆರು ತಂಡಗಳು ಸ್ಪರ್ಧೆ ಮಾಡಲಿವೆ.
Ranji Trophy season to begin from February 16
ಈ ನಡುವೆ ಈ ಬಾರಿಯ ಟೂರ್ನಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಪ್ರತಿ ತಂಡಗಳು ಗುಂಪಿನಲ್ಲಿ ಐದು ಪಂದ್ಯಗಳನ್ನು ಆಡಬೇಕಿತ್ತು. ಆದ್ರೆ ಈ ಬಾರಿ ಮೂರು ಪಂದ್ಯಗಳನ್ನು ಮಾತ್ರ ಆಡಲಿದೆ. ಇದು ಆಟಗಾರರ ಸಂಭಾವಣೆಯ ಮೇಲೆ ಪರಿಣಾಮ ಬೀರಲಿದೆ.
ರಣಜಿ ಟ್ರೋಫಿ ಇತಿಹಾಸದಲ್ಲೇ ಕಳೆದ ವರ್ಷ ಮೊದಲ ಬಾರಿ ರದ್ದುಗೊಳಿಸಲಾಗಿತ್ತು. ಇದು ಆಟಗಾರರ, ರೆಫ್ರಿಗಳು ಮತ್ತು ಸಿಬ್ಬಂದಿಗಳ ಆರ್ಥಿಕ ಸ್ಥಿತಿಗತಿಯ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಇದು ಭಾರತ ಕ್ರಿಕೆಟ್ ಗೂ ಪರಿಣಾಮ ಬೀರಿದೆ. ರಣಜಿ ಟೂರ್ನಿ ಭಾರತೀಯ ಕ್ರಿಕೆಟ್ ನ ಬೆನ್ನೆಲುಬು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.
ಅಂದ ಹಾಗೇ ಬಿಸಿಸಿಐಗೆ ಈ ಬಾರಿಯ ರಣಜಿ ಟ್ರೋಫಿಯನ್ನು ಆಯೋಜನೆ ಮಾಡುವುದು ಸವಾಲಿನ ಪ್ರಶ್ನೆಯಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯನ್ನು ಆಯೋಜನೆ ಮಾಡಲಿದೆ.