team india ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಲೀಡರ್ – ಇರ್ಫಾನ್ ಪಠಾಣ್

ವಿರಾಟ್ ಕೊಹ್ಲಿ ಈಗ ಟೀಮ್ ಇಂಡಿಯಾದ ನಾಯಕನಲ್ಲ. ಮೂರು ಮಾದರಿಯ ಕ್ರಿಕೆಟ್ ನ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. ಇದೀಗ ಮಾಜಿ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸಾಮಾನ್ಯ ಆಟಗಾರ.
ಹಾಗಂತ ವಿರಾಟ್ ಕೊಹ್ಲಿಗೆ ಯಾವುದೇ ಜವಾಬ್ದಾರಿ ಇಲ್ಲ ಅಂತ ಹೇಳುವಂಗಿಲ್ಲ. ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ವಿರಾಟ್ ಕೊಹ್ಲಿಯವರ ಜವಾಬ್ದಾರಿ ಜಾಸ್ತಿಯಾಗಿದೆ ಅಂತ ಹೇಳ್ತಾರೆ.
ಟೀಮ್ ಇಂಡಿಯಾದ ಶ್ರೇಷ್ಠ ಟೆಸ್ಟ್ ನಾಯಕರಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ.ಇದರಲ್ಲಿ ಎರಡು ಮಾತಿಲ್ಲ. ಇದೀಗ ನಾಯಕತ್ವದ ಒತ್ತಡವಿಲ್ಲದೆ ಇದ್ರೂ ತಂಡದ ಯಶಸ್ಸಿಗೆ ಅವರ ಕೊಡುಗೆ ಬಹಳಷ್ಟಿದೆ ಎಂಬ ಅಭಿಪ್ರಾಯವನ್ನು ಇರ್ಫಾನ್ ಪಠಾಣ್ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಲ್ಲ. ಆದ್ರೆ ಅವರು ತಂಡದಲ್ಲಿರುವಷ್ಟು ಸಮಯ ಟೀಮ್ ಇಂಡಿಯಾದ ಲೀಡರ್. ತಂಡದ ನಾಯಕನಿಗೆ ವಿರಾಟ್ ಕೊಹ್ಲಿ ಬೆಂಬಲವಾಗಿ ನಿಲ್ಲಬೇಕು. ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ಪ್ರವೃತ್ತಿ ಮತ್ತು ರೋಹಿತ್ ಶರ್ಮಾ ಅವರ ತಾಳ್ಮೆಯಿಂದಾಗಿ ಟೀಮ್ ಇಂಡಿಯಾ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.team india – Virat Kohli will help the new captain, says Irfan Pathan
ಹೌದು, ಫಿಟ್ ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಇನ್ನೊಂದು ಹಂತಕ್ಕೆ ಬೆಳೆಸಿದ್ದಾರೆ. ನಾಯಕನಾಗಿ ವಿರಾಟ್ ಕೊಹ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ. ಇದೀಗ ಹಿರಿಯ ಆಟಗಾರನಾಗಿ ತಂಡಕ್ಕೆ ಅವರ ಸಲಹೆ, ಮಾರ್ಗದರ್ಶನಗಳ ಅಗತ್ಯವಿದೆ ಎಂದು ಹೇಳಿದ್ರು.
ಇನ್ನೊಂದೆಡೆ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ಆಲ್ ರೌಂಡರ್ ದೀಪಕ್ ಹೂಡಾ ಅವರ ಪ್ರತಿಭೆ, ಸಾಮಥ್ರ್ಯ ಮತ್ತು ಬದ್ದತೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ರು. ದೀಪಕ್ ಹೂಡಾ ಅವರು ಮ್ಯಾಚ್ ವಿನ್ನರ್ ಆಟಗಾರ ಎಂದು ಬಣ್ಣಿಸಿದ್ರು. ಅಲ್ಲದೆ ಹೂಡಾ ಜೊತೆ ತಾನು ಅಭ್ಯಾಸ ನಡೆಸುತ್ತಿದ್ದ ದಿನಗಳನ್ನು ಮತ್ತು ಕ್ರಿಕೆಟ್ ಬಗ್ಗೆ ಅವರಿಗಿರುವ ಕಾಳಜಿಯನ್ನು ಇದೇ ವೇಳೆ ನೆನಪಿಸಿಕೊಂಡ್ರು.