Ranji Trophy 2022- ಸೌರಾಷ್ಟ್ರ ತಂಡದಲ್ಲಿ ಆಡಲಿರುವ ಚೇತೇಶ್ವರ ಪೂಜಾರ
ಕಳಪೆ ಫಾರ್ಮ್ ನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಚೇತೇಶ್ವರ ಪೂಜಾರ ಅವರು ರಣಜಿ ಟೂರ್ನಿಯಲ್ಲಿ ಆಡಲಿದ್ದಾರೆ. ಸೌರಾಷ್ಟ್ರದ ತಂಡದ ಆಡಲಿರುವ ಚೇತೇಶ್ವರ ಪೂಜಾರ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತಿಗೆ ಬೆಲೆ ಕೊಟ್ಟಿದ್ದಾರೆ. ಈ ಹಿಂದೆ ಸೌರವ್ ಗಂಗೂಲಿ ಅವರು ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ ಮತ್ತು ಹಾರ್ದಿಕ್ ಪಾಂಡ್ಯ ಅವರು ರಣಜಿ ಪಂದ್ಯದಲ್ಲಿ ಆಡ್ತಾರೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದ್ರೆ ಹಾರ್ದಿಕ್ ಪಾಂಡ್ಯ ಅವರು ಗಂಗೂಲಿ ಮಾತನ್ನು ದಿಕ್ಕರಿಸಿದ್ದಾರೆ.
ಚೇತೇಶ್ವರ ಪೂಜಾರ ಅವರು ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ ಮೆನ್. ಆದ್ರೆ ಚೇತೇಶ್ವರ ಪೂಜಾರ ಅವರ ಬ್ಯಾಟ್ ನಿಂದ ನಿರೀಕ್ಷಿತ ಮಟ್ಟದಲ್ಲಿ ರನ್ ಗಳು ಹರಿದು ಬರುತ್ತಿಲ್ಲ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಅವರ ಸ್ಥಾನ ಕೂಡ ಅಲುಗಾಡುತ್ತಿತ್ತು. ಇದೀಗ ರಣಜಿ ಟೂರ್ನಿಯಲ್ಲಿ ಕಳೆದು ಹೋಗಿರುವ ಬ್ಯಾಟಿಂಗ್ ಫಾರ್ಮ್ ಅನ್ನು ಕಂಡುಕೊಂಡು ಮುಂದಿನ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯನ್ನು ಪೂಜಾರ ಎದುರು ನೋಡುತ್ತಿದ್ದಾರೆ.
21 ಸದಸ್ಯರನ್ನೊಳಗೊಂಡ ಚಾಂಪಿಯನ್ ಸೌರಾಷ್ಟ್ರ ತಂಡವನ್ನು ಜಯದೇವ್ ಉನಾದ್ಕಟ್ ಅವರು ಮುನ್ನಡೆಸಲಿದ್ದಾರೆ. ಈ ಬಾರಿಯ ಟೂರ್ನಿಗೆ ಅನುಭವಿ ಚೇತೇಶ್ವರ ಪೂಜಾರ ಅವರು ತಂಡದ ಬೆನ್ನಲುಬಾಗಿದ್ದಾರೆ. Ranji Trophy 2022 – Cheteshwar Pujara named in Saurashtra squad
ಕಳೆದ ವರ್ಷ ಕೋವಿಡ್ ನಿಂದಾಗಿ ರಣಜಿ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಆದ್ರೆ ಈ ಬಾರಿ ಬಿಸಿಸಿಐ ಎರಡು ಹಂತಗಳಲ್ಲಿ ರಣಜಿ ಟೂರ್ನಿಯನ್ನು ಆಯೋಜನೆ ಮಾಡಿದೆ. ಮೊದಲ ಹಂತದ ಪಂದ್ಯಗಳು ಫೆಬ್ರವರಿ 10ರಿಂದ ನಡೆಯಲಿದೆ. ಎರಡನೇ ಹಂತದಲ್ಲಿ ನಾಕೌಟ್ ಪಂದ್ಯಗಳು ನಡೆಯಲಿದ್ದು, ಮೇ 30ರಿಂದ ಆರಂಭವಾಗಲಿದೆ.
ಸೌರಾಷ್ಟ್ರ ರಣಜಿ ತಂಡ
ಜಯದೇವ್ ಉನಾದ್ಕಟ್ (ನಾಯಕ), ಚೇತೇಶ್ವರ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವದಾ, ಚಿರಾಗ್ ಜಾನಿ, ಕಮಲೇಶ್ ಮಕ್ವಾನ, ಧರ್ಮೆಂದ್ರಸಿನ್ಹಾ ಜಡೇಜಾ, ಚೇತನ್ ಸಕಾರಿಯಾ, ಪ್ರೆರಾಕ್ ಮಂಕಡ್, ವಿಶ್ವರಾಜ್ ಸಿನ್ಹಾ ಜಡೇಜಾ, ಹಾರ್ವಿಕ್ ದೇಸಾಯಿ, ಕೇವಿನ್ ಜಿವ್ರಾಜನಿ, ಕುಶಾಂಗ್ ಪಟೇಲ್, ಜೈ ಚೌಹಾಣ್, ಸಮರ್ಥ್ ವ್ಯಾಸ್, ಪ್ರರ್ಥ್ ಕುಮಾರ್ ಭೂಟ್, ಯುವ್ರಾಜ್ ಸಿನ್ಹಾ ಚುಡಸಾಮಾ, ದೇವಾಂಗ್, ಕರಮಟ, ಸ್ನೇಲ್ ಪಟೇಲ್, ಕಿಶಾನ್ ಪರ್ಮಾರ್, ಆದಿತ್ಯಾ ಜಡೇಜಾ