ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ನ ಬಹು ಅಮೂಲ್ಯ ಭಾಗ. ರಣಜಿ ಟ್ರೋಫಿಯಲ್ಲಿ ಮಿಂಚಿದವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗ್ಯಾರೆಂಟಿ ಅನ್ನುವ ಮಾತಿದೆ. ಇವತ್ತಿಗೂ ರಣಜಿ ಟ್ರೋಫಿ ಹಲವು ಕ್ರಿಕೆಟಿಗರ ಜೀವನಕ್ಕೆ ಆಧಾರ. ರಣಜಿ ಟ್ರೋಫಿಯಲ್ಲಿ ಹಲವು ದಾಖಲೆಗಳು ಕೂಡ ಇವೆ.
4999- ಇಲ್ಲಿ ತನಕ ರಣಜಿ ಟ್ರೋಫಿಯಲ್ಲಿ ನಡೆದ ಪಂದ್ಯಗಳು. ಈ ಬಾರಿಯ ಸೀಸನ್ನ ಮೊದಲ ದಿನವೇ 5000 ಪಂದ್ಯಗಳ ಗಡಿ ದಾಟಲಿರುವ ರಣಜಿ ಟ್ರೋಫಿ
41: ಮುಂಬೈ ತಂಡ 41 ಬಾರಿ ಚಾಂಪಿಯನ್ ಆಗಿತ್ತು. ಕರ್ನಾಟಕ 8, ದೆಹಲಿ 7 ಬಾರಿ ಚಾಂಪಿಯನ್ ಆಗಿರುವುದು ಎರಡನೇ ಮತ್ತು 3ನೇ ಗರಿಷ್ಠ. ಬರೋಡ 5 ಬಾರಿ ಕಪ್ ಗೆದ್ದಿದ್ದರೆ, ಹೋಳ್ಕರ್ ತಂಡ 4 ಬಾರಿ ಚಾಂಪಿಯನ್ ಆಗಿತ್ತು
40: ವಾಸಿಂ ಜಾಫರ್ ರಣಜಿಯಲ್ಲಿ ಸಿಡಿಸಿರುವ ಶತಕಗಳ ಸಂಖ್ಯೆ. ಕರ್ನಾಟಕ ಬ್ರಿಜೇಶ್ ಪಟೇಲ್ 26 ಶತಕಗಳನ್ನು ಸಿಡಿಸಿದ್ದರು.
156: ವಾಸಿಂ ಜಾಫರ್ ರಣಜಿಯಲ್ಲಿ 156 ಪಂದ್ಯಗಳನ್ನಾಡಿ ಗರಿಷ್ಠ ಪಂದ್ಯಗಳನ್ನಾಡಿದ ದಾಖಲೆ ಬರೆದಿದ್ದಾರೆ. ಕರ್ನಾಟಕದ ಸುನೀಲ್ ಜೋಷಿ 104 ಪಂದ್ಯಗಳನ್ನು ಆಡಿದ್ದರು.
12038: ರಣಜಿ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ವಾಸಿಂ ಜಾಫರ್ ಹೆಸರಿನಲ್ಲಿದೆ.
636: ರಾಜೇಂದ್ರ ಗೊಯೆಲ್ ರಣಜಿ ಇತಿಹಾಸದಲ್ಲಿ ಪಡೆದಿರುವ ವಿಕೆಟ್ಗಳ ಸಂಖ್ಯೆ
449: ರಣಜಿ ಟ್ರೋಫಿಯಲ್ಲಿ ಕರ್ನಾಟಕ 1934ರಿಂದ ಆಡಿರುವ ಪಂದ್ಯಗಳ ಸಂಖ್ಯೆ. ಈ ಪೈಕಿ 203ರಲ್ಲಿ ಜಯ ದಾಖಲಿಸಿದ್ದರೆ, 67ರಲ್ಲಿ ಸೋಲು ಕಂಡಿದೆ. 179 ಪಂದ್ಯಗಳು ಡ್ರಾ ಗೊಂಡಿದ್ದವು.