IPL 2022- 89.90 ಕೋಟಿ ಖರ್ಚು…! ಮುಂಬೈ ಇಂಡಿಯನ್ಸ್ ತಂಡದ ಫುಲ್ ಡಿಟೇಲ್ಸ್..!
ಮುಂಬೈ ಇಂಡಿಯನ್ಸ್… ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಹಾಗೇ ಶ್ರೀಮಂತ ತಂಡ ಕೂಡ ಹೌದು. ನೀತಾ ಅಂಬಾನಿ ಒಡೆತನ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವ ಮುಂಬೈ ಇಂಡಿಯನ್ಸ್ ತಂಡಕ್ಕೆ ತನ್ನದೇ ಆದ ಘನತೆಯನ್ನು ಪಡೆದುಕೊಂಡಿದೆ.
ಅಲ್ಪಾವಧಿಯ ಗುರಿ.. ದೀರ್ಘಾವಧಿಯ ದೂರದೃಷ್ಟಿ.. ಇದು ಮುಂಬೈ ಇಂಡಿಯನ್ಸ್ ತಂಡದ ಮಂತ್ರ ಮತ್ತು ತಂತ್ರ.
ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ
ರಿಟೇನ್ ಆಟಗಾರರಿಗೆ ಕೊಟ್ಟಿರುವ ದುಡ್ಡು – 42 ಕೋಟಿ ರೂ.
ಇಶಾನ್ ಕಿಶಾನ್ಗೆ ಗರಿಷ್ಠ ಹಣ ನೀಡಿ ಖರೀದಿ – 15.25 ಕೋಟಿ ರೂ.
21 ಮಂದಿ ಖರೀದಿ ಮಾಡಿರುವ ಆಟಗಾರರಿಗೆ ನೀಡಿರುವ ದುಡ್ಡು – 47.10 ಕೋಟಿ ರೂ.
ಮುಂಬೈ ಇಂಡಿಯನ್ಸ್ ಜೇಬಿನಲ್ಲಿದ್ದ ಹಣ – 90 ಕೋಟಿ ರೂ.
ಒಟ್ಟು ಖರ್ಚು ಮಾಡಿರುವ ಹಣ – 89.90 ಕೋಟಿ ರೂ.
ಜೇಬಿನಲ್ಲಿ ಉಳಿಸಿಕೊಂಡ ಹಣ – 10 ಲಕ್ಷ ರೂ.
ಒಟ್ಟು ಆಟಗಾರರು -25 (17 ಭಾರತೀಯರು, 8 ವಿದೇಶಿ ಆಟಗಾರರು)
15ನೇ ಆವೃತ್ತಿಯ ಟೂರ್ನಿಗೆ ಬಲಿಷ್ಠ ತಂಡವನ್ನೇ ಕಟ್ಟಿದೆ. ನಾಯಕ ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ, ಕಿರಾನ್ ಪೊಲಾರ್ಡ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ರಿಟೇನ್ ಮಾಡಿಕೊಂಡಿದೆ. ಹಾಗೇ ಇಶಾನ್ ಕಿಶಾನ್ ಅವರನ್ನು ಗರಿಷ್ಠ ಮಟ್ಟಕ್ಕೆ ಬಿಡ್ ಮಾಡಿ ಖರೀದಿ ಮಾಡಿಕೊಂಡಿದೆ. ಟೀಮ್ ಡೇವಿಡ್ ಮತ್ತು ಜೋಫ್ರಾ ಆರ್ಚೆರ್ ಅವರು ಹೊಸದಾಗಿ ಖರೀದಿ ಮಾಡಿಕೊಂಡಿದೆ. ತಂಡದಲ್ಲಿ ಒಟ್ಟು 25 ಆಟಗಾರರು ಇದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ನಿಗದಿತ 90 ಕೋಟಿ ರೂಪಾಯಿಗಳಲ್ಲಿ 89.90 ಕೋಟಿ ರೂಪಾಯಿ ಆಟಗಾರರಿಗೆ ಖರ್ಚು ಮಾಡಿದೆ. ಜೇಬಿನಲ್ಲಿ 10 ಲಕ್ಷ ರೂಪಾಯಿ ಮಾತ್ರ ಉಳಿಸಿಕೊಂಡಿದೆ. 25 ಮಂದಿ ಆಟಗಾರರಲ್ಲಿ 17 ಮಂದಿ ಭಾರತದ ಮತ್ತು 8 ಮಂದಿ ವಿದೇಶಿ ಆಟಗಾರರು ಇದ್ದಾರೆ. ipl 2022 – Mumbai Indians full team squad details
ಮುಂಬೈ ಇಂಡಿಯನ್ಸ್ ತಂಡ
ರಿಟೇನ್ ಆಟಗಾರರು –
ರೋಹಿತ್ ಶರ್ಮಾ – 16 ಕೋಟಿ ರೂ.
ಜಸ್ಪ್ರಿತ್ ಬೂಮ್ರಾ – 12 ಕೋಟಿ ರೂ.
ಸೂರ್ಯಕುಮಾರ್ ಯಾದವ್ – 8 ಕೋಟಿ ರೂ.
ಕಿರಾನ್ ಪೊಲಾರ್ಡ್ – 6 ಕೋಟಿ ರೂ.
ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರು
ಇಶಾನ್ ಕಿಶಾನ್ – 15.25 ಕೋಟಿ ರೂ.
ಟೀಮ್ ಡೇವಿಡ್ – 8.25 ಕೋಟಿ ರೂ.
ಜೋಫ್ರಾ ಆರ್ಚೆರ್ – 8 ಕೋಟಿ ರೂ.
ಡೆವಾಲ್ಡ್ ಬ್ರೆವಿಸ್ – 3 ಕೋಟಿ ರೂ.
ಡೇನಿಯಲ್ ಸ್ಯಾಮ್ಸ್ – 2.6 ಕೋಟಿ ರೂ.
ಎನ್. ತಿಲಕ್ ವರ್ಮಾ – 1.7 ಕೋಟಿ ರೂ.
ಮುರುಗನ್ ಅಶ್ವಿನ್ – 1.6 ಕೋಟಿ ರೂ.
ಟೈಮಲ್ ಮಿಲ್ಸ್ – 1.5 ಕೋಟಿ ರೂ.
ಜಯದೇವ್ ಉನಾದ್ಕಟ್ – 1.3 ಕೋಟಿ ರೂ.
ರಿಲೇಯ್ ಮೆರೆಡಿತ್ – 1 ಕೋಟಿ ರೂ.
ಫ್ಯಾಬಿಯನ್ ಆಲೆನ್ – 75 ಲಕ್ಷ ರೂ.
ಮಯಾಂಕ್ ಮಾರ್ಕಂಡೆ – 65 ಲಕ್ಷ ರೂ.
ಸಂಜಯ್ ಯಾದವ್ – 50 ಲಕ್ಷ ರೂ.
ಅರ್ಜುನ್ ತೆಂಡುಲ್ಕರ್ – 30 ಲಕ್ಷ ರೂ.
ಬಾಸಿಲ್ ತಂಪಿ – 30 ಲಕ್ಷ ರೂ.
ಆರ್ಶಾದ್ ಖಾನ್ – 20 ಲಕ್ಷ ರೂ.
ಆನ್ಮೋಲ್ ಪ್ರೀತ್ ಸಿಂಗ್ – 20 ಲಕ್ಷ ರೂ.
ರಮನ್ ದೀಪ್ ಸಿಂಗ್ – 20 ಲಕ್ಷ ರೂ.
ರಾಹುಲ್ ಬುದ್ಧಿ – 20 ಲಕ್ಷ ರೂ.
ಹೃತಿಕ್ ಶೊಖೀನ್ – 20 ಲಕ್ಷ ರೂ.
ಆರ್ಯಾನ್ ಜುಯಾಲ್ – 20 ಲಕ್ಷ ರೂ.