Rajvardhan Hangargekar – ಮೋಸ ಮಾಡಿದ್ರಾ ರಾಜ್ವರ್ಧನ್ ಹಂರ್ಗಗೆಕರ್ ? ಸಿಎಸ್ ಕೆ ಆಟಗಾರನ ಮೇಲಿರುವ ಆರೋಪ ಏನು ?

ರಾಜ್ವರ್ಧನ್ ಹಂರ್ಗಗೆಕರ್ .. ಭಾರತೀಯ ಕ್ರಿಕೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಆಲ್ ರೌಂಡರ್. 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡದಲ್ಲಿದ್ದ ರಾಜ್ವರ್ಧನ್ ವಿರುದ್ಧ ಆರೋಪವೊಂದು ಕೇಳಿಬಂದಿದೆ.
ವೇಗದ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡುವ ರಾಜ್ವರ್ಧನ್ ಗೆ ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರೀ ಬೇಡಿಕೆ ಕೂಡ ಬಂದಿತ್ತು. ಈ ಯುವ ಆಲ್ ರೌಂಡರ್ ನನ್ನು ಖರೀದಿ ಮಾಡಲು ಮುಂಬೈ ಇಂಡಿಯನ್ಸ್ ಮತ್ತು ಸಿಎಸ್ ಕೆ ತಂಡ ಭಾರೀ ಪೈಪೋಟಿ ನಡೆಸಿತ್ತು. ಅಂತಿಮವಾಗಿ ರಾಜ್ಯವರ್ಧನ್ ಅವರು 1.5 ಕೋಟಿ ರೂಪಾಯಿಗೆ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ.
ಇದೀಗ ರಾಜ್ವರ್ಧನ್ ಅವರ ಕ್ರಿಕೆಟ್ ಬದುಕಿಗೆ ಕಂಟಕವಾಗಿರುವ ಆರೋಪವೊಂದು ಕೇಳಿಬಂದಿದೆ. ಸಮ್ಮಾ ದಿನಪ್ರತಿಕೆಗೆ ಮಹಾರಾಷ್ಟ್ರದ ಕ್ರೀಡಾ ಇಲಾಖೆಯ ಆಯುಕ್ತರು ಹೇಳಿಕೆಯನ್ನು ನೀಡಿದ್ದಾರೆ. ಇದು ರಾಜ್ವರ್ಧನ್ ಅವರಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಮಹಾರಾಷ್ಟ್ರದ ಕ್ರೀಡಾ ಇಲಾಖೆಯ ಆಯುಕ್ತರಾದ ಓಂ ಪ್ರಕಾಶ್ ಬಾಕೊರಿಯಾ ಅವರು ರಾಜ್ವರ್ಧನ್ ಹಂಗರ್ಗೆಕರ್ ಅವರು ಮೋಸ ಮಾಡಿದ್ದಾರೆ ಎಂದು ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ರಾಜ್ವರ್ಧನ್ ಅವರು ತನ್ನ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿದ್ದಾರೆ. ಜನವರಿ 10, 2001ರ ಬದಲು ನವೆಂಬರ್ 10, 2002 ಎಂದು ಬದಲಾವಣೆ ಮಾಡಿ ವಂಚನೆ ಮಾಡಿದ್ದಾರೆ. ರಾಜ್ಯ ವರ್ಧನ್ ಅವರು ಕ್ರೀಡಾ ಸ್ಪೂರ್ತಿ ಮತ್ತು ನೈತಿಕತೆಗೆ ದಕ್ಕೆಯನ್ನುಂಟು ಮಾಡಿದ್ದಾರೆ. ಇದು ಕ್ರೀಡೆಗೆ ಮಾಡಿರುವ ಮೋಸ. ಇದ್ರಿಂದ ರಾಷ್ಟ್ರದ ಘನತೆಗೆ ಕಪ್ಪು ಚುಕ್ಕೆಯಾಗುತ್ತೆ. ರಾಜ್ವರ್ಧನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. Rajvardhan Hangargekar despite age fraud allegation
ಆದ್ರೆ ಬಿಸಿಸಿಐ ಯುವ ಆಲ್ ರೌಂಡರ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಯಾಕಂದ್ರೆ ವಿವಿಧ ವಯೋಮಿತಿ ತಂಡದ ಪರ ಆಡುವಾಗಲೇ ರಾಜ್ವರ್ಧನ್ ಅವರ ಮೂಳೆಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಅದರಲ್ಲಿ ಯಾವುದೇ ಸಂಶಯಗಳು ಬಂದಿರಲಿಲ್ಲ. ಹೀಗಾಗಿ ಬಿಸಿಸಿಐ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ.
ಎಕ್ಸ್ ಪ್ರೆಸ್ ವೇಗದಲ್ಲಿ ಬೌಲಿಂಗ್ ಜೊತೆಗೆ ಹೊಡಿಬಡಿ ಆಟದ ಮೂಲಕವೂ ರಾಜ್ವರ್ಧನ್ ಅವರು ಗಮನ ಸೆಳೆದಿದ್ದಾರೆ. 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ರಾಜ್ವರ್ಧನ್ ಹಂಗರ್ಗೆಕರ್ ಅವರು ಆರು ಪಂದ್ಯಗಳಲ್ಲಿ ಐದು ವಿಕೆಟ್ ಉರುಳಿಸಿದ್ದರು.