ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಅವರ ಅದ್ಭುತ ಆಟದಿಂದ ಹಲವು ತಂಡಗಳ ಪ್ಲೇ ಆಫ್ ಕನಸು ಕಮರಿದೆ. ಆರ್‌ಆರ್‌ನ 3 ವಿದೇಶಿ ಆಟಗಾರರಾದ ಜಿಮ್ಮಿ ನೀಶಮ್, ಟ್ರೆಂಟ್ ಬೌಲ್ಟ್ ಮತ್ತು ಡ್ಯಾರೆಲ್ ಮಿಚೆಲ್ ಅವರು ಬಾಲಿವುಡ್ ಹಾಡಿನಲ್ಲಿ ಎಕ್ಸ್‌ಪ್ರೆಶನ್‌ಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ತೀವ್ರ ವೈರಲ್ ಆಗುತ್ತಿದೆ.
ಹೇರಾ ಫೇರಿ ಚಿತ್ರದ ‘ಏ ಮೇರಿ ಜೊಹ್ರಾಜಬಿನ್’ ಹಾಡಿನಲ್ಲಿ ಮೂವರು ಆಟಗಾರರು ಕಪ್ಪು ಹಾಫ್ ಪ್ಯಾಂಟ್ ಮತ್ತು ಬಿಳಿಯ ಉಡುಪನ್ನು ಧರಿಸಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ಬಾರಿ ತಂಡ 4 ವರ್ಷಗಳ ಬಳಿಕ ಪ್ಲೇ ಆಫ್ ತಲುಪಿದೆ. ಈ ತಂಡವು 2018 ರಲ್ಲಿ ಕೊನೆಯ ಬಾರಿಗೆ ಪ್ಲೇ ಆಫ್ ತಲುಪಿತ್ತು. ಸಂಭ್ರಮದಲ್ಲಿ ಮುಳುಗಿರುವ ಆಟಗಾರರ ಶೈಲಿ ನೋಡಲೇಬೇಕು.
The Dhoom Dhadaka gang has three new members! 🤌😂💗#RoyalsFamily | @JimmyNeesh | @dazmitchell47 pic.twitter.com/cAoh0yvFX5
— Rajasthan Royals (@rajasthanroyals) May 18, 2022
ಹಿಮೇಶ್ ರೇಶಮಿಯಾ ಅವರ ಧ್ವನಿಯಲ್ಲಿ ಈ ಹಾಡು ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿತ್ತು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅದರ ಮೇಲೆ ಕುಣಿದು ಕುಪ್ಪಳಿಸಿದ್ದರು. ಇದೀಗ ನ್ಯೂಜಿಲೆಂಡ್‌ನ ಈ 3 ಆಟಗಾರರು ಮತ್ತೆ ಜನರಿಗೆ ಹಿಂದಿನದನ್ನು ನೆನಪಿಸಿದ್ದಾರೆ.
ರಾಜು, ಬಾಬು ರಾವ್, ಘನಶ್ಯಾಮ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಹೇರಾ ಫೇರಿ ಚಿತ್ರದ ಈ ಮೂರು ಪಾತ್ರಗಳು ಬಹಳ ಜನಪ್ರಿಯವಾಗಿವೆ. ಜಿಮ್ಮಿ ನೀಶಮ್ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದಾರೆ. ಅವರ ವಿಶಿಷ್ಟ ಶೈಲಿಯನ್ನು ಅಭಿಮಾನಿಗಳು ಸ್ವಲ್ಪ ಸಮಯದಿಂದ ನೋಡುತ್ತಿದ್ದಾರೆ. ಆದರೆ, ಈ ಅವತಾರದಲ್ಲಿ ಟ್ರೆಂಟ್ ಬೌಲ್ಟ್ ಅವರಂತಹ ದಿಗ್ಗಜ ಬೌಲರ್ ನೋಡಿರುವುದು ಅಭಿಮಾನಿಗಳಿಗೆ ಹೊಸ ಅನುಭವ.

ಐಪಿಎಲ್ 15ರ 68ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿತು. 2008ರಲ್ಲಿ ಆಡಿದ ಮೊದಲ ಋತುವಿನ ನಂತರ ರಾಜಸ್ಥಾನ ತಂಡವು ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪ್ರವೇಶಿಸಿದೆ.
ಅಶ್ವಿನ್ ರಾಜಸ್ಥಾನ ಪರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು ಮತ್ತು ಕೇವಲ 23 ಎಸೆತಗಳಲ್ಲಿ 40 ರನ್ ಗಳಿಸಿದರು. ಇದೇ ಸಮಯದಲ್ಲಿ ಯಶಸ್ವಿ ಬ್ಯಾಟ್‌ನಿಂದ 59 ರನ್‌ಗಳು ಬಂದವು. ಚೆನ್ನೈ ಪರ ಪ್ರಶಾಂತ್ ಸೋಲಂಕಿ 2 ವಿಕೆಟ್ ಪಡೆದರು.
ಐಪಿಎಲ್ 2022ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ಗುಜರಾತ್ ಕಾದಾಟ ನಡೆಸಲಿವೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.