ಟೀಂ ಇಂಡಿಯಾದ ಸ್ಟಾರ್ ಬೌಲರ್ ದೀಪಕ್ ಚಹಾರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಅವರು ಜೂನ್ 1 ರಂದು ಆಗ್ರಾದಲ್ಲಿ ಜಯಾ ಭಾರದ್ವಾಜ್ ಅವರೊಂದಿಗೆ ಸಪ್ತ ಪದಿ ತುಳಿಯಲಿದ್ದಾರೆ.
ಮೇ 31 ರಿಂದ ಆಗ್ರಾದ ಜೇಪೀ ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ದೀಪಕ್ ಅವರ ಕುಟುಂಬ ಸ್ನೇಹಿತ ಪುನೀತ್ ವಶಿಷ್ಟ್ ತಿಳಿಸಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ದೀಪಕ್ ಗೆಳತಿ ಜಯಾಗೆ ಉಂಗುರ ನೀಡಿ ಪ್ರೀತಿ ಪ್ರಸ್ತಾಪಿಸಿದ್ದರು.

ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪಂಜಾಬ್ ನಾಯಕ ಕೆಎಲ್ ರಾಹುಲ್ ಚಪ್ಪಾಳೆ ತಟ್ಟುವ ಮೂಲಕ ದೀಪಕ್ ಅವರನ್ನು ಅಭಿನಂದಿಸಿದರು.
ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ಗಾಯದ ಸಮಸ್ಯೆಯಿಂದ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಭಾರತದ T-20 ಸರಣಿಯ ಸಂದರ್ಭದಲ್ಲಿ 29 ವರ್ಷದ ಆಟಗಾರ ಗಾಯಗೊಂಡಿದ್ದರು.

ದೀಪಕ್ ಚಹಾರ್ ಮತ್ತು ಜಯ ಭಾರದ್ವಾಜ್ ಅವರನ್ನು ದೀಪಕ್ ಸಹೋದರಿ ಮಾಲ್ತಿ ಭೇಟಿಯಾಗಿದ್ದರು. ದೀಪಕ್ ಅವರ ಸಹೋದರಿ ಮಾಲ್ತಿ ಚಹಾರ್ ನಟಿ ಮತ್ತು ರೂಪದರ್ಶಿ. ದೀಪಕ್ ಜಯಾ ಅವರನ್ನು ಇಡೀ ಕುಟುಂಬಕ್ಕೆ ಪರಿಚಯಿಸಿದರು ಮತ್ತು ಸಂಬಂಧವನ್ನು ಅಂತಿಮಗೊಳಿಸಿದರರು. ಜಯಾ ದೆಹಲಿಯ ಬರಾಖಂಬಾ ಮೂಲದವರು.
ಜಯಾ ಚಿಕ್ಕವಳಿದ್ದಾಗ ಅವರ ತಂದೆ ತೀರಿಕೊಂಡರು. ಜಯಾ ಅವರ ತಾಯಿ ಹೋರ್ಡಿಂಗ್ ಡಿಸೈನ್ ವ್ಯವಹಾರವನ್ನು ವಹಿಸಿಕೊಂಡರು ಮತ್ತು ಇಬ್ಬರೂ ಮಕ್ಕಳನ್ನು ಬೆಳೆಸಿದರು. ಎಂಬಿಎ ಮಾಡಿದ ನಂತರ ಜಯಾ ದೆಹಲಿಯ ಟೆಲಿಕಾಂ ಕಂಪನಿಯೊಂದರಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್ ಮುಖ್ಯಸ್ಥೆ.