Rahul Dravid – ಜಸ್ಪ್ರಿತ್ ಬೂಮ್ರಾ ಅನುಪಸ್ಥಿತಿ ತಂಡಕ್ಕೆ ಬಿಗ್ ಲಾಸ್..!
ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ವೇಗಿ ಜಸ್ಪ್ರಿತ್ ಬೂಮ್ರಾ ಅವರ ಅನುಪಸ್ಥಿತಿ ತಂಡಕ್ಕೆ ಬಿಗ್ ಲಾಸ್ ಎಂದು ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಈಗಾಗಲೇ ಬಿಸಿಸಿಐ ಜಸ್ಪ್ರಿತ್ ಬೂಮ್ರಾ ಅವರು ಟಿ-20 ವಿಶ್ವಕಪ್ ಗೆ ಅಲಭ್ಯರಾಗುತ್ತಾರೆ ಎಂದು ಖಚಿತಪಡಿಸಿದೆ. ಇನ್ನೊಂದೆಡೆ ಜಸ್ಪ್ರಿತ್ ಬೂಮ್ರಾ ಅವರ ಅಲಭ್ಯತೆ ಸಹಜವಾಗಿ ಟೀಮ್ ಇಂಡಿಯಾಗೆ ದೊಡ್ಡ ನಷ್ಟವನ್ನುಂಟು ಮಾಡಲಿದೆ. ಅಲ್ಲದೆ ಡೆತ್ ಓವರ್ ಗಳಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಹೊಡೆತವನ್ನುಂಟು ಮಾಡಲಿದೆ.
ಜಸ್ಪ್ರಿತ್ ಬೂಮ್ರಾ ಅವರು ಅದ್ಬುತ ಆಟಗಾರ. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ನಷ್ಟ. ಆದ್ರೂ ಕೆಲವೊಂದು ಸಲ ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತೆ. ಆದ್ರೆ ಬೂಮ್ರಾ ಅವರ ಅನುಪಸ್ಥಿತಿ ಇನ್ನೊಬ್ಬರಿಗೆ ಅವಕಾಶವನ್ನು ನೀಡುತ್ತದೆ. ಖಂಡಿತವಾಗಿಯೂ ನಾವು ಜಸ್ಪ್ರಿತ್ ಬೂಮ್ರಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಇನ್ನು ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗಳನ್ನು ಗೆದ್ದುಕೊಂಡಿದೆ. ಈ ಎರಡು ಸರಣಿಗಳಲ್ಲಿ ಕೂಡ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಕೈ ವಶಮಾಡಿಕೊಂಡಿದೆ. ಈ ಸರಣಿ ಗೆಲುವಿನ ಬಗ್ಗೆಯೂ ರಾಹುಲ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಜಸ್ಪ್ರಿತ್ ಬೂಮ್ರಾ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹಾಗೇ ನೋಡಿದ್ರೆ ಜಸ್ಪ್ರಿತ್ ಬೂಮ್ರಾ ಅವರಿಗೆ ವರ್ಕ್ ಲೋಡ್ ಜಾಸ್ತಿ ಏನು ಆಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೂಮ್ರಾ ಅವರು 2019ರಿಂದ ಆಡಿದ್ದು ಕೇವಲ 16 ಪಂದ್ಯಗಳನ್ನು ಮಾತ್ರ. ಒಟ್ಟಾರೆ ಟೀಮ್ ಇಂಡಿಯಾ 70 ಪಂದ್ಯಗಳನ್ನು ಆಡಿದೆ. ಆದ್ರೆ ಬೂಮ್ರಾ ಅವರು 2019ರಿಂದ 60 ಐಪಿಎಲ್ ಪಂದ್ಯಗಳಲ್ಲಿ 59 ಪಂದ್ಯಗಳನ್ನು ಆಡಿದ್ದಾರೆ.