ಸೌತ್ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟರ್ ಮತ್ತೊಮ್ಮೆ ಡೆಡ್ಲಿ ಬ್ಯಾಟಿಂಗ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಎರಡನೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಮಿಲ್ಲರ್ ಕಿಲ್ಲರ್ ಖ್ಯಾತಿಯ ಡೇವಿಡ್ ಮಿಲ್ಲರ್ ಮೂರನೆ ಟಿ20 ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಮೂರನೆ ಪಂದ್ಯದ ಕೊನೆಯ ಓವರ್ ನಲ್ಲಿ ಕ್ರಿಸ್ಗೆ ಬಂದ ಡೇವಿಡ್ ಮಿಲ್ಲರ್ ದೀಪಕ್ ಚಾಹರ್ ಅಬ್ಬರಿಸಿದರು. ಮೂರು ಹ್ಯಾಟ್ರಿಕ್ ಸಿಕ್ಸರ್ ಗಳನ್ನು ಸಿಡಿಸಿ ಕಿಲ್ಲರ್ ಆದರು. ಒಟ್ಟು 19 ರನ್ ಚಚ್ಚಿದರು.
ಇವರ ನೆರೆವಿನಿಂದ ದ.ಆಪ್ರಿಕಾ 227 ರನ್ ಪೇರಿಸಲು ಸಾಧ್ಯವಾಯಿತು.
ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಗಳನ್ನ ಸಿಡಿಸುವ ಮೂಲಕ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಮಿಲ್ಲರ್ ಅಳಿಸಿ ಹಾಕಿದ್ದರು.
ವಿಶ್ವ ಕ್ರಿಕೆಟ್ ನಲ್ಲಿ ಧೋನಿ ಗ್ರೇಟ್ ಫಿನೀಶರ್ ಎನಿಸಿಕೊಂಡಿದ್ದರು. ಟಿ20 ಆವೃತ್ತಿಯಲ್ಲಿ ಕೊನೆಯ 5 ಓವರ್ ಗಳಲ್ಲಿ ಸಾವಿರ ಸಾವಿರ ರನ್ ಪೂರೈಸಿದ ಏಕೈಕ ಬ್ಯಾಟರ್ ಎಂದ ದಾಖಲೆ ಅವರ ಹೆಸರಿನಲ್ಲಿತ್ತು.
ಇದೀಗ ಡೇವಿಡ್ ವಾರ್ನರ್ ಕೊನೆಯ 5 ಓವರ್ ಗಳಲ್ಲಿ 1102 ರನ್ ಪೂರೈಸಿ ಧೋನಿ ದಾಖಲೆಯನ್ನು ಮುರಿದಿದ್ದಾರೆ. ಧೊನಿ 1014 ರನ್ ಹೊಡೆದಿದ್ದರು. ಇದೀಗ ಈ ದಾಖಲೆಯನ್ನು ಡೇವಿಡ್ ಮಿಲ್ಲರ್ ಅಳಿಸಿ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.