Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Tennis

Rafael Nadal- 324 ನಿಮಿಷಗಳ ಹೋರಾಟ.. ಸೋಲಿನ ಭೀತಿಯಲ್ಲಿ ಗೆಲುವಿನ ಘರ್ಜನೆ.. ಇದು ನಡಾಲ್ ಸ್ಪೆಷಲ್

January 31, 2022
in Tennis, ಕ್ರಿಕೆಟ್, ಟೆನಿಸ್
Rafael Nadal poses with the Australian Open sports karnataka
Share on FacebookShare on TwitterShare on WhatsAppShare on Telegram

Rafael Nadal- 324 ನಿಮಿಷಗಳ ಹೋರಾಟ.. ಸೋಲಿನ ಭೀತಿಯಲ್ಲಿ ಗೆಲುವಿನ ಘರ್ಜನೆ.. ಇದು ನಡಾಲ್ ಸ್ಪೆಷಲ್

: Rafael Nadal poses with the Australian Open men's singles final trophy sports karnataka ಅದು 5 ಗಂಟೆ 24 ನಿಮಿಷಗಳ ಹೋರಾಟ. ಸ್ಪೇನ್ ನ ಗೂಳಿ ರಫೆಲ್ ನಡಾಲ್ ಗೆ 35ರ ಹರೆಯ. ಎದುರಾಳಿ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಗೆ 25 ವರ್ಷ. ವಯಸ್ಸಿನಲ್ಲಿ ಹತ್ತು ವರ್ಷಗಳ ಅಂತರ. ಡೇನಿಯಲ್ ಬಿಸಿ ರಕ್ತದ ಯುವಕ.. ಆದ್ರೆ ನಡಾಲ್ ಗೆ ದೈಹಿಕ ಸಮಸ್ಯೆ. ಫಿಟ್ ನೆಸ್ ತೊಂದರೆ ಜೊತೆಗೆ ಗಾಯದ ಸಮಸ್ಯೆ. ಆದ್ರೂ ನಡಾಲ್‍ಗೆ ಪ್ಲಸ್ ಪಾಯಿಂಟ್ ಆಗಿದ್ದು ಅನುಭವ.

ಹೀಗಾಗಿಯೇ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡ್ರು. ಅಷ್ಟೇ ಅಲ್ಲ 21 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಪಡೆದು 145 ವರ್ಷಗಳ ಗ್ರ್ಯಾಂಡ್ ಸ್ಲ್ಯಾಂ ಇತಿಹಾಸದಲ್ಲೇ ಗರಿಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ರು.
ಹಾಗೇ ನೋಡಿದ್ರೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ರಫೆಲ್ ನಡಾಲ್ ಪ್ರಶಸ್ತಿ ಗೆಲ್ಲುವುದು ಖಚಿತವಾಗಿತ್ತು. ಯಾಕಂದ್ರೆ ಬದ್ದ ಎದುರಾಳಿಗಳಾದ ರೋಜರ್ ಫೆಡರರ್ ಮತ್ತು ನೊವಾಕ್ ಜಾಕೊವಿಕ್ ಟೂರ್ನಿಯಲ್ಲಿ ಆಡಿರಲಿಲ್ಲ. ಫೆಡರರ್ ಗೆ ಗಾಯದ ಸಮಸ್ಯೆ. ನೊವಾಕ್ ಜಾಕೊವಿಕ್ ಕೋವಿಡ್ ಲಸಿಕೆ ವಿಚಾರದಲ್ಲಿ ಅಧಿಕಪ್ರಸಂಗ ಮಾಡಲು ಹೋಗಿ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಹೀಗಾಗಿ ರಫೆಲ್ ನಡಾಲ್ ಗೆ ಪ್ರಶಸ್ತಿ ಗೆಲ್ಲುತ್ತಾರೆ ಅನ್ನೋ ನಂಬಿಕೆ ಇತ್ತು. ಅದಕ್ಕೆ ತಕ್ಕಂತೆ ಫೈನಲ್ ಪಂದ್ಯದವರೆಗೂ ಆಡ್ಕೊಂಡು ಬಂದಿದ್ದರು.
ಆದ್ರೆ ರಫೆಲ್ ನಡಾಲ್ ಅವರಿಗೆ ಫೈನಲ್ ಪಂದ್ಯ ಅಷ್ಟೊಂದು ಸುಲಭವಿರಲಿಲ್ಲ. ಎರಡನೇ ಶ್ರೇಯಾಂಕಿತ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರು ರಫೆಲ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಸೂಚನೆ ನೀಡಿದ್ರು. ಅಲ್ಲದೆ ಮೊದಲ ಎರಡು ಸೆಟ್ ಗಳಲ್ಲಿ ಮುನ್ನಡೆ ಪಡೆದುಕೊಂಡು ಪ್ರಶಸ್ತಿ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದರು.
ಆದ್ರೆ ಅಂತಿಮ ಮೂರು ಸೆಟ್ ಗಳಲ್ಲಿ ಸ್ಪೇನ್ ಗೂಳಿಯ ಆರ್ಭಟಕ್ಕೆ ಡೇನಿಯಲ್ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರವಿರಲಿಲ್ಲ. 324 ನಿಮಿಷಗಳ ಕಾಲ ಹೋರಾಟ ನಡೆಸಿದ್ದ ರಫೆಲ್ ಕೊನೆಗೂ ಗೆಲುವಿನ ನಗೆ ಬೀರಲು ಯಶಸ್ವಿಯಾದ್ರು. ನಡಾಲ್ ಬೆವರಿಳಿಸಿದ ಡೇನಿಯಲ್ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡ್ರು.
ಸುಸ್ತಾಗಿದ್ದ ರಫೆಲ್ ನಡಾಲ್ ಗೆ ದಾಖಲೆ ಪ್ರಶಸ್ತಿಯ ಸಂಭ್ರಮವನ್ನು ಅನುಭವಿಸಲು ಕೂಡ ಎನರ್ಜಿ ಇರಲಿಲ್ಲ. ಅಷ್ಟೊಂದು ಸುಸ್ತಾಗಿದ್ದರು.
ಇದು ನನ್ನ ಪಾಲಿಗೆ ಭಾವನಾತ್ಮಕ ರಾತ್ರಿ. ದೈಹಿಕವಾಗಿ ನಾನು ಬಹಳ ಕುಗ್ಗಿ ಹೋಗಿದ್ದೇನೆ. ಈ ಪಂದ್ಯದ ಅವಿಸ್ಮರಣೀಯ ಘಟನೆಗಳನ್ನು ನನಗೆ ಮೆಲುಕು ಹಾಕಲು ಕೂಡ ನನಗೆ ಸಾಧ್ಯವಿಲ್ಲ. ಯಾಕಂದ್ರೆ ನಾನು ಅಷ್ಟೊಂದು ಸುಸ್ತಾಗಿದ್ದೇನೆ. ಆದ್ರೂ ನಾನು ಹೋರಾಟವನ್ನು ಇಷ್ಟಪಡುತ್ತೇನೆ. ಆದ್ರೆ ಇಂತಹ ಕಾದಾಟಕ್ಕೆ ನಾನು ದೈಹಿಕವಾಗಿ ರೆಡಿಯಾಗಿರಲಿಲ್ಲ. ಯಾಕಂದ್ರೆ ನಾನು ಸರಿಯಾಗಿ ತರಬೇತಿ ಕೂಡ ನಡೆಸಿರಲಿಲ್ಲ. ಆದ್ರೆ ಈ ಪ್ರಶಸ್ತಿ ನನಗೆ ವಿಶೇಷವಾಗಿದೆ. ನನ್ನನ್ನು ನಂಬಿ. ನಾನು ಸೂಪರ್. ಸೂಪರ್ ಆಗಿಯೇ ಸುಸ್ತಾಗಿದ್ದೇನೆ. ನನಗೆ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ ಎಂದು ರಫೆಲ್ ನಡಾಲ್ ಪ್ರಶಸ್ತಿ ಗೆದ್ದ ನಂತರ ಹೇಳಿದ್ರು.
: Rafael Nadal sports karnataka  aus open 2022 ಅಂದ ಹಾಗೇ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2009ರಲ್ಲಿ ಗೆದ್ದಿದ್ದರು. ಇದೀಗ 13 ವರ್ಷಗಳ ಬಳಿಕ ಬ್ಲ್ಯೂ ಕೋರ್ಟ್ ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ನಾಲ್ಕು ಬಾರಿ ಫೈನಲ್ ನಲ್ಲಿ ಸೋತಿದ್ದಾರೆ.
ಒಟ್ಟಿನಲ್ಲಿ ರಫೆಲ್ ಟೆನಿಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಎರಡು ಆಸ್ಟ್ರೇಲಿಯನ್ ಓಪನ್, 13 ಬಾರಿ ಫ್ರೆಂಚ್ ಓಪನ್, ಎರಡು ಬಾರಿ ವಿಂಬಲ್ಡನ್ ಮತ್ತು ನಾಲ್ಕು ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಸ್ವಿಜರ್‍ಲೆಂಡ್ ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಈಗ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದು ಇದೀಗ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.

21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಒಡೆಯ ರಫೆಲ್ ನಡಾಲ್

ಆಸ್ಟೇಲಿಯನ್ ಓಪನ್ – 2009 ಮತ್ತು 2022

ಫ್ರೆಂಚ್ ಓಪನ್ – 2005, 2006, 2007, 2008, 2010, 2011, 2012, 2013, 2014, 2017, 2018, 2019, 2020

ವಿಂಬಲ್ಡನ್ – 2008, 2010

ಯುಎಸ್ ಓಪನ್ – 2010, 2013, 2017, 2019

6ae4b3ae44dd720338cc435412543f62?s=150&d=mm&r=g

admin

See author's posts

Tags: aus open 2022Australian OpenAustralian Open 2022Australian open results 2022Novak DjokovikRafael NadalRoger FedererSports Karnatakatennis
ShareTweetSendShare
Next Post
2022 Australian Open: sports karnataka

ನಡಾಲ್​ ಫಸ್ಟ್​​​, ಟಾರ್ಗೆಟ್​​ 25 ಫಿಕ್ಸ್​​​..!

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram