ಆಸ್ಟ್ರೇಲಿಯನ್ ಓಪನ್ ಗೆದ್ದ ಸ್ಪೇನ್ ಗೂಳಿ ರಾಫೆಲ್ ನಡಾಲ್ ಈಗ ಪುರುಷರ ವಿಭಾಗದಲ್ಲಿ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ನಂಬರ್ ವನ್ ಟೆನಿಸ್ ಆಟಗಾರ. ಆಧುನಿಕ ಟೆನಿಸ್ ಜಗತ್ತಿನ ಸರದಾರ. 2 ಆಸ್ಟ್ರೇಲಿಯನ್ ಓಪನ್, 13 ಫ್ರೆಂಚ್ ಓಪನ್, 2 ವಿಂಬಲ್ಡನ್ ಮತ್ತು 4 ಯು.ಎಸ್. ಓಪನ್ ಪ್ರಶಸ್ತಿ ಗೆದ್ದಿರುವ ನಡಾಲ್ ಈಗ ಸೆರ್ಬಿಯಾದ ನೊವಾಕ್ ಜಾಕೋವಿಕ್ ಮತ್ತು ಸ್ವಿಟ್ಜರ್ ಲೆಂಡ್ನ ರೋಜರ್ ಫೆಡರರ್ ಅವರನ್ನು ಹಿಂದಿಕ್ಕಿದ್ದಾರೆ.
ಸೆರ್ಬಿಯಾದ ಜಾಕೋವಿಕ್ 21 ಗ್ರಾಂಡ್ ಸ್ಲಾಂಗಳನ್ನು ಗೆದ್ದಿದ್ದಾರೆ. ಜಾಕೋ 9 ಆಸ್ಟ್ರೇಲಿಯನ್ ಓಪನ್, 2 ಫ್ರೆಂಚ್ ಓಪನ್ ಮತ್ತು 6 ವಿಂಬಲ್ಡನ್ ಮೂಲಕ 21 ಗ್ರಾಂಡ್ ಸ್ಲಾಂಗಳ ಒಡೆಯನಾಗಿದ್ದಾರೆ.
ಸ್ವಿಸ್ ಮಾಸ್ಟರ್ ರೋಜರ್ ಫೆಡರರ್, 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್, 8 ವಿಂಬಲ್ಸನ್ ಮತ್ತು 5 ಯು.ಎಸ್. ಓಪನ್ ಮೂಲಕ 21 ಗ್ರಾಂಡ್ ಸ್ಲಾಂ ಗೆದ್ದಿದ್ದಾರೆ.
14 ಗ್ರಾಂಡ್ ಸ್ಲಾಂ ಗೆದ್ದಿರುವ ಅಮೆರಿಕದ ಪೀಟ್ ಸಾಂಪ್ರಾಸ್ ನಡಾಲ್, ಜಾಕೋವಿಕ್ ಮತ್ತು ಫೆಡರರ್ ನಂತರದ ಸ್ಥಾನ ಪಡೆದಿದ್ದಾರೆ.
ಮಹಿಳಾ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ 24 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿದ್ದಾರೆ. 23 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ನಂತರದ ಸ್ಥಾನದಲ್ಲಿದ್ದಾರೆ. 22 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿರುವ ಜರ್ಮನಿಯ ಸ್ಟೆಫಿ ಗ್ರಾಫ್ ಮೂರನೇ ಸ್ಥಾನದಲ್ಲಿದ್ದಾರೆ.
ಸದ್ಯ ನಡಾಲ್ ಕೋರ್ಟ್ ಹೆಸರಿನಲ್ಲಿರುವ 24 ಗ್ರಾಂಡ್ ಸ್ಲಾಂ ದಾಖಲೆ ಮುರಿಯುವ ಕಡೆ ಚಿತ್ತ ನೆಟ್ಟಿದ್ದಾರೆ. ಆದರೆ ಟಾರ್ಗೆಟ್ 25ಕ್ಕೆ ಮೊದಲು ಮುತ್ತಿಕ್ಕುವ ಆಟಗಾರ ಯಾರು ಅನ್ನುವುದು ಸಖತ್ ಇಂಟರೆಸ್ಟಿಂಗ್ ಆಗಿದೆ.