ಎರಡು ಬಾರಿ ಒಲಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು, ಜಕಾರ್ತ್ ನಲ್ಲಿ ನಡೆದಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ.
ಮಹಿಳಾ ವಿಭಾಗದ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯಾವೋ, ಏಳನೇ ರ‍್ಯಾಂಕ್‌ನ ಪಿ.ವಿ.ಸಿಂಧು ಅವರನ್ನು 21-14, 21-18 ರಿಂದ ಎರಡು ನೇರ ಗೇಮ್‌ಗಳ ಆಟದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
ಮೊದಲ ಗೇಮ್‌ನಲ್ಲಿ ಅರಂಭದಿಂದಲೇ ಮೇಲುಗೈ ಸಾಧಿಸಿದ ಹೆ ಬಿಂಗ್ ಜಿಯಾವೋ, ಗೇಮ್ ಅನ್ನು ಹೆಚ್ಚಿನ ಪರಿಶ್ರಮವಿಲ್ಲದೇ 21-14 ರಿಂದ ಜಯಿಸಿ 1-0 ರ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಉಭಯ ಆಟಗಾರ್ತಿಯರು ಸಮಬಲದ ಪೈಪೋಟಿ ನೀಡಿದ್ದರಿಂದ ಪ್ರತಿ ಅಂಕಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆದಿದ್ದರಿಂದ ಪಂದ್ಯ ರೋಚಕ ಹಂತ ಕಂಡಿತು.ಅಂತಿಮವಾಗಿ ಗೇಮ್ ಅನ್ನು 21-18 ರಿಂದ ಚೀನಾದ ಹೆ ಬಿಂಗ್ ಜಿಯಾವೋ ವಶ ಪಡೆಸಿಕೊಂಡರು.

ಸಾಯಿ ಪ್ರಣೀತ್‌ಗೆ ಸೋಲು
ಭಾರತದ ಬಿ.ಸಾಯಿ ಪ್ರಣೀತ್ ಕೂಡ ಸೋಲಿನ ಕಹಿ ಅನುಭವಿಸಿದ್ದಾರೆ. ಡೆನ್ಮಾರ್ಕ್ನ ಹ್ಯಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗಸ್, ಪ್ರಣೀತ್ ಅವರನ್ನು 21-16, 21-19 ರಿಂದ ಎರಡು ನೇರ ಗೇಮ್‌ಗಳ ಆಟದಲ್ಲಿ ಸೋಲಿಸಿ ಮುನ್ನಡೆದರು.