ಗಾಲೆ ಟೆಸ್ಟ್ ಮೂರೇ ದಿನಕ್ಕೆ ಮುಗಿದು ಹೋಗಿದೆ. ಅತಿಥೇಯ ಶ್ರೀಲಂಕಾಕ್ಕೆ ಸ್ಪಿನ್ ಬಲೆ ಹೆಣೆದ ಆಸೀಸ್ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಅದ್ಭುತ ಆಟ ಪ್ರದರ್ಶಿಸಿದ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಮುಂದೆ ಹೋಗಿದೆ.
3ನೇ ದಿನ ಆಟ ಆರಂಭಿಸಿದ ಆಸ್ಟ್ರೇಲಿಯಾ ಹೆಚ್ಚು ಹೊತ್ತು ಆಡಲಿಲ್ಲ. ನಾಯಕ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ವೆಪ್ಸನ್ ಬೇಗನೆ ಔಟಾದರು. ಆಸ್ಟ್ರೇಲಿಯಾ 321 ರನ್ಗಳಿಗೆ ತನ್ನ ಆಟ ಮುಗಿಸಿತ್ತು. 118 ರನ್ಗಳ ಬಹುಮುಖ್ಯ ಮುನ್ನಡೆಯನ್ನು ಕೂಡ ಆಸೀಸ್ ಪಡೆದುಕೊಂಡಿತ್ತು.
2ನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಪವೆಲಿಯನ್ ಪರೇಡ್ ನಡೆಸಿತು. ನಿಸ್ಸಾಂಕ (14), ಕರುಣಾ ರತ್ನೆ (23), ಕುಸಾಲ್ ಮೆಂಡಿಸ್ (8), ಫೆರ್ನಾಂಡೋ (12) ರನ್ಗಳಿಸಿದರು. ಧನಂjಜಯ ಡಿ ಸಿಲ್ವಾ, ಚಾಂಡಿಮನ್ ಮತ್ತು ಡಿಕ್ವೆಲ್ಲಾ ಕೂಡ ಹೆಚ್ಚಿನ ರನ್ಗಳಿಸಲಿಲ್ಲ.
2ನೇ ಇನ್ನಿಂಗ್ಸ್ನಲ್ಲಿ ಶ್ರೀಲಂಕಾ ಕೇವಲ 113 ರನ್ಗಳಿಗೆ ಆಲೌಟ್ ಆಯಿತು. ನಾಥನ್ ಲಯನ್ 4 ಹಾಗೂ ಟ್ರಾವಿಸ್ ಹೆಡ್ 4 ವಿಕೆಟ್ ಪಡೆದರೆ, ಸ್ವೆಪ್ಸನ್ 2 ವಿಕೆಟ್ ಪಡೆದರು. 5 ರನ್ಗಳ ಜಯದ ಗುರಿ ಪಡೆದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ಗೆದ್ದು ಬೀಗಿತು.