ಬಾಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ನಲ್ಲಿ ಗುರುವಾರ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ.
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು 21-10, 21-13 ರಿಂದ ಜರ್ಮನಿಯ ಇವೋನ್ ಲಿ ವಿರುದ್ಧ 31 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು. ಸತತ ಎರಡು ಗೇಮ್ ಗಳಲ್ಲಿ ಜಯ ಸಾಧಿಸಿದ ಸಿಂಧು ಏಕ ಪಕ್ಷೀಯ ಜಯ ಸಾಧಿಸಿದರು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ 18-21, 7-21 ರಿಂದ ಥಾಯ್ಲೆಂಡ್ ನ ಕುನ್ಲವುಟ್ ವಿಟಿಡ್ಸಾರ್ನ್ ವಿರುದ್ಧ 46 ನಿಮಿಷಗಳ ಹೋರಾಟದಲ್ಲಿ ಆಘಾತ ಕಂಡರು. ಇನ್ನೊಂದು ಪಂದ್ಯದಲ್ಲಿ ಲಕ್ಷ್ಯ ಸೇನೆ 15-21, 14-21 ರಿಂದ ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ಸೋಲು ಕಂಡರು.
ಮಹಿಳೆಯರ ಡಬಲ್ಸ್ ನಲ್ಲಿ ಕರ್ನಾಟದಕ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಜೋಡಿ 19-21, 20-22ರಿಂದ ಬಲ್ಗೇರಿಯಾ ಜೋಡಿಯ ವಿರುದ್ಧ ಸೋಲು ಕಂಡಿತು.