ಬೆಂಗಳೂರು: ಅರ್ಹತಾ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆಕಾಂಕ್ಷಾ ದಿಲೀಪ್ ನಿಟ್ಟುರೆ ಇಲ್ಲಿ ನಡೆದಿರುವ ಐಟಿಎಫ್ ಅಂತಾರಾಷ್ಟ್ರೀಯ ಟೂರ್ ಚಾಂಪಿಯನ್ ಶಿಪ್ ನ ಪ್ರಧಾನ ಘಟ್ಟದಲ್ಲೂ ಸ್ಥಿರ ಪ್ರದರ್ಶನ ನೀಡಿದ್ದು ಕ್ವಾರ್ಟರ್ ಫೈನಲ್ಸ್ ಹಂತ ಪ್ರವೇಶಿಸಿದ್ದಾರೆ.
ಐದು ವರ್ಷ ಇದ್ದಾಗ ಆಕಾಂಕ್ಷಾ ಟೆನಿಸ್ ರಾಕೆಟ್ ಕೈಯಲ್ಲಿ ಹಿಡಿದರು. ಅಲ್ಲಿಂದ ಅಂಗಳದಲ್ಲಿ ಬೆವರು ಹರಿಸಿದ ಇವರು ಗುರುವಾರ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಆಕಾಂಕ್ಷಾ ದಿಲೀಪ್ ನಿಟ್ಟುರೆ 6-4, 2-6, 6-2 ರಿಂದ ಸಾತ್ವಿಕಾ ಸಾಮಾ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಮಣಿಸಿ ಮುನ್ನಡೆ ಸಾಧಿಸಿದರು.
ಅಗ್ರ ಶ್ರೇಯಾಂಕಿತೆ ರುತುರಾಜ್ ಭೋಸಲೆ 6-3, 6-3ರಿಂದ ಎರಡು ನೇರ ಸೆಟ್ ಗಳಲ್ಲಿ ರೇಷ್ಮಾ ಮುರಾರಿಯನ್ನು ಮಣಿಸಿ ಮುನ್ನಡೆದಿದ್ದಾರೆ.
ಉಳಿದಂತೆ ವೈದೇಹಿ ಚೌಧರಿ 6-3, 6-2 ರಿಂದ ಸಾಯಿ ಸಂಹಿತಾ ಚಾಮರ್ಥಿ ಅವರನ್ನು, ಸೌಜನ್ಯ ಬಾವಿಸೆಟ್ಟಿ 6-2, 6-2ಹಾ ಸಾದಿಕ್ ಅವರನ್ನ, ಕೋರಿಯಾದ ಸೋ-ರಾ ಲೀ 6-2, 6-0 ರಿಂದ ರಷ್ಯಾದ ಜ್ಲಾಟಾ ಯಾಂಕೋವ್ಸ್ಕಯಾ ಅವರನ್ನು, ರಶ್ಮಿಕಾ ಭಮಿಡಿಪತಿ 6-2, 6-1 ರಿಂದ ಪ್ರತಿಭಾ ನಾರಾಯಣ ಪ್ರಸಾದ್ ಅವರನ್ನು, ಪ್ರತ್ಯುಷಾ ರಾಚಪುಡಿ 2-6, 6-2, 6-4 ರಿಂದ ಜಗ್ಮೀತ್ ಕೌರ್ ಗ್ರೆವಾಲ್ ಅವರನ್ನು, ಪ್ರಾಂಜಲಾ ಯಡಪಲ್ಲಿ 6-3, 6-3 ರಿಂದಯುಬಾರಾಣಿ ಬ್ಯಾನರ್ಜಿ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆದರು.
ಮಹಿಳೆಯರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ನಲ್ಲಿ ಶರ್ಮದಾ ಬಾಲು/ಶ್ರಾವ್ಯಾ ಶಿವಾನಿ ಚಿಲಕಪುಡಿ, ವೈದೇಹಿ ಚೌಧರಿ/ಮಿಹಿಕಾ ಯಾದವ್, ಸಾಯಿ ಸಂಹಿತಾ ಚಮರ್ಥಿ/ಸಾದಿಕ್ ಸೋಹಾ, ಸೌಜನ್ಯ ಬಾವಿಸೆಟ್ಟಿ/ರುತುಜಾ ಭೋಸಲೆ ಜೋಡಿ ಜಯ ಸಾಧಿಸಿದ್ದಾರೆ.