ಭರವಸೆಯ ಆಟಗಾರ ಮೋಹಿತ್ ಗೋಯತ್ ಹಾಗೂ ಅಸ್ಲಂ ಇನಾಂದಾರ್ ಅವರ ಭರ್ಜರಿ ಪ್ರದರ್ಶನದ ಫಲವಾಗಿ ಪುಣೇರಿ ಪಲ್ಟನ್ 42-25 ರಿಂದ ದಬಾಂಗ್ ದೆಹಲಿ ಕೆ.ಸಿ ತಂಡವನ್ನು ಮಣಿಸಿತು.
ಸೋಮವಾರ ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿಯ 76ನೇ ಪಂದ್ಯದಲ್ಲಿ ಪಲ್ಟನ್ ಆರ್ಭಟಿಸಿತು. ಈ ಜಯದ ಮೂಲಕ ಪಲ್ಟನ್ 13 ಪಂದ್ಯಗಳಲ್ಲಿ 32 ಅಂಕ ಸೇರಿಸಿತು. ದೆಹಲಿ ತಂಡ 13 ಪಂದ್ಯಗಳಲ್ಲಿ 43 ಅಂಕ ಸೇರಿಸಿದ್ದು ಎರಡನೇ ಸ್ಥಾನದಲ್ಲಿದೆ. ಅಲ್ಲದೆ ಟೂರ್ನಿಯಲ್ಲಿ ದಬಾಂಗ್ ಗೆ ಇದು ನಾಲ್ಕನೇ ಸೋಲಾಗಿದೆ.
ಮೊದಲಾವಧಿಯಲ್ಲಿ ಸೊಗಸಾದ ಪ್ರದರ್ಶನ ನೀಡಿದ ಪಲ್ಟನ್ 25-13 ರಿಂದ ಮುನ್ನಡೆ ಸಾಧಿಸಿತು. ಅಲ್ಲದೆ ಈ ಅವಧಿಯಲ್ಲಿ ದಬಾಂಗ್ ತಂಡ ಎರಡು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲೂ ಪುಣೇರಿ 17-12 ರಿಂದ ಮುನ್ನಡೆಯಿತು. ಎರಡನೇ ಅವಧಿಯಲ್ಲಿ ಪುಟಿದೇಳುವ ದಬಾಂಗ್ ತಂಡದ ಆಸೆ ಫಲಿಸಲಿಲ್ಲ. ಈ ವೇಳೆ ಪುಣೇರಿ ಮತ್ತೊಮ್ಮೆ ಎದುರಾಳಿ ತಂಡವನ್ನು ಆಲೌಟ್ ಮಾಡಿತು.
ಪುಣೇರಿ ತಂಡ ರೈಡ್ ನಲ್ಲಿ 18 ಹಾಗೂ ಟ್ಯಾಕಲ್ ನಲ್ಲಿ 13 ಅಂಕ ಸೇರಿಸಿತು. ದಬಾಂಗ್ ತಂಡದ ಮೋಹಿತ್ 16 ಬಾರಿ ರೈಡ್ ಮಾಡಿ 10 ಅಂಕ ಸೇರಿಸಿತು. ರಕ್ಷಣಾ ಆಟಗಾರ ಸಂಬೀರ್ ಆರು ಅಂಕ ಸೇರಿಸಿ ಮಿಂಚಿದರು.