ಪುಣೇರಿ ಪಲ್ಟಾನ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 43 -27 ಅಂಕಗಳಿಂದ ಸುಲಭ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಪುಣೇರಿ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿತು.
ಪುಣೆಯ ಶಿವಛತ್ರಪತಿ ಸೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ಪರ ರೈಡರ್‍ಗಳಾದ ಆಕಾಶ್ ಶಿಂಧೆ 10 ಅಂಕ, ಅಸ್ಲಾಮ್ ಇನಾಂದಾರ್ 9, ಮೋಹಿತ್ ಗೊಯತ್ 8 ಅಂಕ ಪಡೆದರು. ಬೆಂಗಾಲ್ ಪರ ಏಕಾಂಗಿ ಹೋರಾಟ ಮಾಡಿದ ರೈಡರ್ ಮಣಿಂದರ್ ಸಿಂಗ್ 14 ಅಂಕ ಪಡೆದರು.
ಮತ್ತೊಂದು ಪಂದ್ಯದಲ್ಲಿ ರೈಡರ್ ಮಂಜೀತ್ ಅವರ ಅಮೋಘ ಪ್ರದರ್ಶನದಿಂದ ಹರ್ಯಾಣ ಸ್ಟೀಲರ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 33-32 ಅಂತರದಿಂದ ರೋಚಕ ಗೆಲುವು ಪಡೆಯಿತು. ಸತತ ಮೂರು ಸೋಲುಗಳ ಬಳಿಕ ಗೆಲುವಿನ ಲಯಕ್ಕೆ ಮರಳಿದೆ.
ಜಿದ್ದಾಜಿದ್ದಿನ ಕದನದ ಮೊದಲಾರ್ಧದಲ್ಲಿ ಹರ್ಯಾಣ, ಗುಜರಾತ್ ವಿರುದ್ಧ 21-16 ಅಂಕಗಳಿಂದ ಮುನ್ನಡೆ ಪಡೆದಿತ್ತು.
ಹಾರ್ಯಾಣ ಪರ ರೈಡರ್‍ಗಳಾದ ಮಂಜೀತ್ 14 ಅಂಕ, ಮೀತು ಶರ್ಮಾ 5, ಡಿಫೆಂಡರ್ಗಳಾದ ಜೋಗಿಂದರ್ ಹಾಗೂ ಜೈದೀಪ್ ತಲಾ 3 ಅಂಕ ಪಡೆದರು.
ಗುಜರಾತ್ ಪರ ರೈಡರ್‍ಗಳಾದ ಚಂದ್ರನ್ 8 ಅಂಕ ಹಾಗೂ ರಾಕೇಶ್ 7 ಅಂಕ ತಂದುಕೊಟ್ಟರು. ಡಿಫೆಂಡರ್ ರಿಂಕು ನರ್ವಾಲ್ 4 ಅಂಕ ಹಾಗೂ ರೈಡರ್ ಮಹೇಂದ್ರ ರಜಪೂತ್ 4 ಅಂಕ ಸಂಪಾದಿಸಿದರು.