ಪ್ರದೀಪ್ ನರ್ವಾಲ್ ಅವರ ಅಮೋಘ ರೈಡಿಂಗ್ ನೆರವಿನಿಂದ ಯುಪಿ ಯೋಧಾಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್ 50-31 ಹಾಲಿ ಚಾಂಪಿಯನ್ ಡೆಲ್ಲಿ ದಬಾಂಗ್ ತಂಡವನ್ನು ಮಣಿಸಿತು.
ಉತ್ತಮ ಆರಂಭ ಪಡೆದ ಯೋಧಾಸ್ ಮೊದಲಾರ್ಧದಲ್ಲಿ 29-14 ಅಂಕಗಳ ಮುನ್ನಡೆ ಪಡೆದಿತ್ತು.
ಯೋಧಾಸ್ ತಂಡದ ರೈಡರ್ ಪ್ರದೀಪ್ ನರ್ವಾಲ್ 22 ಅಂಕ ತಂದುಕೊಟ್ಟರು. ಮತ್ತೋರ್ವ ರೈಡರ್ ರೋಹಿತ್ ತೋಮರ್ 7 ಅಂಕ, ರೈಡರ್ ಅನಿಲ್ 3 ಅಂಕ ಪಡೆದರು.
ಆಲ್ರೌಂಡರ್ ಗುರುದೀಪ್ 4 ಅಂಕ, ಡಿಫೆಂಡರ್ಗಳಾದ ನಿತೀಶ್, ಸುಮೀತ್ ತಲಾ 2 ಅಂಕ ಪಡೆದರು.
ಡೆಲ್ಲಿ ದಬಾಂಗ್ ಪರ ವಿಜಯ್ ಮಲ್ಲಿಕ್ 13 ಅಂಕ, ನವೀನ್ ಕುಮಾರ್ 8 ಅಂಕ ಪಡೆದರು. ರೈಡರ್ ಅಶು ಮಲ್ಲಿಕ್ 2 ಅಂಕ ಮತ್ತು ವಿಶಾಲ್ 2 ಅಂಕ ಪಡೆದರು.