ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿದೆ.
ಪುಣೆಯ ಶಿವಛತ್ರಪತಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ ಹಾಗೂ ತಮಿಳು ತಲೈವಾಸ್ ತಂಡಗಳು 33-33 ಅಂಕಗಳಿಂದ ಸಮಬಲ ಸಾಧಿಸಿ ಟೈಗೆ ತೃಪ್ತಿಪಟ್ಟವು. ಮೊದಲಾರ್ಧದಲ್ಲಿ ಪಾಟ್ನಾ 20-14 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.
ತಲೈವಾಸ್ ಪರ ರೈಡರ್ ನರೇಂದರ್ 16 ಅಂಕ ಪಡೆದರು. ರೈಡರ್ ಅಜಿಂಕ್ಯ ಪವಾರ್ 7 ಅಂಕ ಸಂಪಾದಿಸಿದರು. ಡಿಫೆಂಡರ್ ಸಾಹಿಲ್ ಗುಳಿಯಾ 4 ಅಂಕ ಸಂಪಾದಿಸಿದರು.
ಪಾಟ್ನಾ ಪರ ರೈಡರ್ ಸಚಿನ್ 14, ಆಲ್ರೌಂಡರ್ ರೋಹಿತ್ ಗುಳಿಯಾ 9 ಅಂಕ, ಆಲ್ರೌಂಡರ್ ಚಿಯಾನೆಹ 4 ಅಂಕ ಸಂಪಾದಿಸಿದರು. ರೈಡರ್ ಮೋನು 2 ಅಂಕ ಸಂಪಾದಿಸಿದರು.